ಕಲಬುರಗಿ: ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಜಮಿಯತ್ ಉಲೆಮಾ ಹಿಂದ್ ಸಂಘಟನೆಯ ಅಧ್ಯಕ್ಷರಾದ ಮೌಲಾನ ವಹಿದ್ ಸಾಹಬ್ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಇಲಿಯಾಸ್ ಭಾಗಬಾನ್ ಅವರು ಅಭ್ಯರ್ಥಿ ಎಂದು ಘೋಷಿಸುವವರಿದ್ದರು. ಆದರೆ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಅವರ ಅಕಾಲಿಕ ನಿಧನದಿಂದಾಗಿ ಅನುಕಂಪದ ಆಧಾರದ ಮೇಲೆ ಕನೀಜ್ ಫಾತಿಮಾ ಅವರಿಗೆ ಟಿಕೆಟ್ ನೀಡಲಾಗಿತ್ತು.
ಚುನಾವಣೆಯಲ್ಲಿ ಗೆದ್ದು ಬಂದ ಶಾಸಕಿ ಉತ್ತರ ಮತಕ್ಷೇತ್ರದ ಮತದಾರರ ಜೊತೆ ಸಂಪರ್ಕ ಇಟ್ಟುಕೊಂಡಿರುವುದಿಲ್ಲ. ಹೀಗಾಗಿ ಇವರನ್ನು ಗೆಲ್ಲಿಸಿದ ಜನರು ಸಾಕಷ್ಟು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಲ್ಲರೊಂದಿಗೆ ಬರೆಯುವ ಸರಳ ವ್ಯಕ್ತಿತ್ವದ ಇಲಿಯಾಸ್ ಸೇಲ್ ಅವರು ಕ್ಷೇತ್ರದ ಲಿಂಗಾಯತ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಈ ಬಾರಿ ಅವರಿಗೆ ಟಿಕೆಟ್ ನೀಡುವಂತೆ ಅವರು ಆಗ್ರಹಿಸಿದ್ದಾರೆ.