ಅಫಜಲಪುರ; ತಾಲೂಕಿನ ಹಸರಗುಂಡಗಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಆಯೋಜಿಸಿದ ಆರೋಗ್ಯ ಅಮೃತ ಅಭಿಯಾನ ತರಬೇತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬೂರು ಬಿ ಕ್ಷೇತ್ರ ಆರೋಗ ಶಿಕ್ಷಣ ಅಧಿಕಾರಿ ಶಶಿಧರ್ ಬಳೆ ವಿಶೇಷ ಉಪನ್ಯಾಸ ನೀಡಿದರು.
ಕ್ಷಯ ರೋಗ ಸಾಂಕ್ರಾಮಿಕ ರೋಗವಾಗಿದ್ದು ಸಕಾಲದಲ್ಲಿ ಚಿಕಿತ್ಸೆ, ಪೌಷ್ಟಿಕ ಆಹಾರ ಸೇವನೆ ಜೊತೆಗೆ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡಾಗ ಕ್ಷಯರೋಗ ದೂರ ಮಾಡಬಹುದು ಅಲ್ಲದೆ ಸಮಾಜದಲ್ಲಿ ಅದು ಒಂದು ಸಾಮಾಜಿಕ ಕಳಂಕ ಎಂಬ ಪಟ್ಟಿಯನ್ನು ತೆಗೆದುಹಾಕಿ ಅದಕ್ಕೆ ಎಲ್ಲರೂ ಒಗ್ಗೂಡಿ ಅದರ ಭೀಕರತೆ ಅರಿತು ಜಾಗೃತಿ ಮೂಡಿಸಿದಾಗ ಎಲ್ಲಾ ರೋಗಗಳಂತೆ ಇದು ವಾಸಿಯಾಗುವ ಪಕ್ಕ ಬರವಸೆಯನ್ನು ಸಮುದಾಯಕ್ಕೆ ತಲುಪಿಸಲು ಎಲ್ಲರೂ ಕೈ ಜೋಡಿಸಿ ಎಂದು ವಿಶೇಷ ಉಪನ್ಯಾಸ ನೀಡುತ್ತಾ ಈಗಾಗಲೇ ವಿಶ್ವದಿಂದ ಸಿಡುಬು ರೋಗ, ದೇಶದಿಂದ ಪೋಲಿಯೊ, ನಾರು ಹುಣ್ಣು ನಿವಾರಣೆ ಮಾಡಲಾಗಿದ್ದು ದಡಾರ ಮತ್ತು ಕುಷ್ಟರೋಗ ನಿರ್ಮೂಲನೆಗೆ ಕ್ರಮ ಜರುಗಿಸಲಾಗಿದೆ.
2025 ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡಲು ಯೋಜನೆ ರೂಪಿಸಲಾಗಿದ್ದು, ಕಠಿಣ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಶಿಬಿರದಲ್ಲಿ ಸೇರಿದ ಎಲ್ಲರ ಒಗ್ಗೂಡುವಿಕೆಯಿಂದ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಹಸರಗುಂಡಗಿ, ಕ್ಷಯ ಮುಕ್ತ ಜಿಲ್ಲೆ ಕಲಬುರ್ಗಿ, ಕ್ಷಯ ಮುಕ್ತ ರಾಜ್ಯ ಕರ್ನಾಟಕ, ಕ್ಷಯ ಮುಕ್ತ ಭಾರತ ಎಂದು ಸಾರಲು ಈ ಗ್ರಾಮ ಪಂಚಾಯಿತಿ ಅಮೃತ ಅಮೃತ ಅಭಿಯಾನದಲ್ಲಿ ಪಣತೊಡೋಣ ಎಂದು ವಿವರಿಸಿದರು.
ಅಲ್ಲದೆ ಕ್ಷಯರೋಗದ ಲಕ್ಷಣಗಳು, ಅದರ ಪರೀಕ್ಷೆ, ಉಚಿತ ಪಕ್ಕ ಚಿಕಿತ್ಸೆ, ಪೌಷ್ಟಿಕ ಆಹಾರ ಬೆಂಬಲಕ್ಕಾಗಿ ರೋಗಿಗೆ ತಿಂಗಳಿಗೆ 500 ರೂಪಾಯಿ ಧನ ಸಹಾಯ, ನಿರೀಕ್ಷೆ ಮಿತ್ರ ಎಂಬ ಯೋಜನೆ ಅಡಿಯಲ್ಲಿ ರೋಗಿಗಳಿಗೆ ದಾನಿಗಳಿಂದ ( ಕ್ಷಯ ಮಿತ್ರ ನೊಂದಣಿ ಮೂಲಕ ) ಪೌಷ್ಟಿಕ ಆಹಾರ ವಿತರಣೆ ನೀಡಿ ಕ್ಷಯ ಮುಕ್ತ ರಾಗಲು ಈ ಎಲ್ಲಾ ಸೌಲಭ್ಯಗಳನ್ನು ಸರಕಾರ ಒದಗಿಸಿದೆ ಎಂದು ಮಾಹಿತಿ ನೀಡಿ ಉಪನ್ಯಾಸ ನೀಡಿದರು, ಸಮುದಾಯ ಆರೋಗ್ಯ ಅಧಿಕಾರಿ ಶೃತಿ ಆರೋಗ್ಯ ಕ್ಷೇಮ ಕೇಂದ್ರ ಹಸರಗುಂಡಗಿ ಅಸಾಂಕ್ರಾಮಿಕ ರೋಗಗಳು, ಮುಟ್ಟಿನ ನೈರ್ಮಲ್ಯ ಕುರಿತು, ಮಾನಸಿಕ ರೋಗ ಕುರಿತು ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೈಲಪ್ಪ ಪಟ್ಟದಾರ್ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳಾದ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಮಲ್ಲಯ್ಯ ಸ್ವಾಮಿ, ಶಿಕ್ಷಕಿ ಮಂಜುಳಾ , ಸಮುದಾಯ ಆರೋಗ್ಯ ಅಧಿಕಾರಿ ಸಾಗನೂರ ಶರಣು ದೊಡ್ಡಮನಿ, ಸಮುದಾಯ ಪ್ರಾಥಮಿಕ ಕಾಳಜಿ ಅಧಿಕಾರಿ ಸುನೀತಾ, ಮತ್ತು ಫೈಯಜ್. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ನ ಉದ್ದೇಶಗಳ ಹಾಗೂ ತರಬೇತಿ ಕುರಿತು ಆಫ್ಜಲಪುರ ತಾಲೂಕ ಕೆಎಚ್ ಪಿಟಿ ಸುಧೀರ್ ಸಾಲಿಮನಿ ಕೆಎಚ್‌ಪಿಟಿ ಅವರ ವಂದನೆಗಳೊಂದಿಗೆ ತರಬೇತಿ ಮುಕ್ತಾಯಗೊಳಿಸಿದ್ದರು.