ಕಲಬುರಗಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ರಂಗಾಯಣ ಕಲಬುರಗಿ ಸಹಯೋಗದಲ್ಲಿ ಧಾತ್ರಿ ರಂಗ ಸಂಸ್ಥೆ ಅರ್ಪಿಸುವ “ಅಕ್ಕ ನಾಗಲಾಂಬಿಕೆ” ನಾಟಕ ಪ್ರದರ್ಶನವನ್ನು ಇದೇ 15 ರಂದು ಸಾಯಂಕಾಲ 5 ಗಂಟೆಗೆ ಹೊಸ ಆರ್. ಟಿ.ಓ ಕಚೇರಿ ಹತ್ತಿರವಿರುವ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ತಿಳಿಸಿದ್ದಾರೆ.
ಶರಣ ಚಿಂತಕರಾದ ವಿಜಯಲಕ್ಷ್ಮಿ ಶಿವಶಂಕರಯ್ಯ ನೆಪೇರಿ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ, ರoಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ಎಚ್. ಚನ್ನೂರರವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ವಡ್ಡನಕೇರಿ ವಹಿಸಲ್ಲಿದ್ದು, ರಜನಿ ಜಗದೀಶ ಪಾಟೀಲ್ ಹಾಗೂ ಧಾತ್ರಿ ರಂಗಸಂಸ್ಥೆಯ ಮಂಜು ಸಿರಿಗೇರಿ ಅವರು ಗೌರವ ಉಪ ಸ್ಥಿತಿ ಸ್ಥಾನವನ್ನು ಅಲಂಕರಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶರಣಬಂಧು ಗಳು ಆಗಮಿಸಿ ನಾಟಕ ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.