ಕಲಬುರಗಿ; 16 ರಂದು ಮಿನಿ ಉದ್ಯೋಗ ಮೇಳ

0
40

ಕಲಬುರಗಿ; ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಇದೇ ಫೆಬ್ರವರಿ 16 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐ.ಟಿ.ಐ. ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸದರಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಂತಿವೆ. ಕಲಬುರಗಿಯ ಹೆಚ್.ಸಿ.ಎಲ್. ಟೆಕ್ನಾಲಜಿಯಲ್ಲಿ ಟೇಲಿ ಕಾಲರ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು. ಲಾಹೋಟಿ ಮೋಟರ್ಸ್ ಪ್ರೈ.ಲೀ.ದಲ್ಲಿ ಎಕ್ಸಿಕ್ಯೂಟಿವ್ ಇನ್ ಸೇಲ್ಸ್ ಅಕೌಂಟ್ಸ್ ಆಂಡ್ ಇನ್ಸುರೆನ್ಸ್ ಹುದ್ದೆಗೆ ಡಿಪ್ಲೋಮಾ/ ಬಿ.ಇ./ಬಿ.ಕಾಂ./ಬಿ.ಎಸ್‍ಸಿ./ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35ವರ್ಷದೊಳಗಿರಬೇಕು.

Contact Your\'s Advertisement; 9902492681

ಕಲಬುರಗಿ ಕುಮಾರಕಿಯಾ ಮೋಟರ್ಸ್‍ದಲ್ಲಿ ಟೇಲಿ ಕಾಲರ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಜಿ.ಎಸ್.ಎಫ್.ಎಮ್. ಸೆಕ್ಯೂರಿಟಿದಲ್ಲಿ ಸೆಕ್ಯೂರಿಟಿಗಾರ್ಡ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 35 ವರ್ಷದೊಳಗಿರಬೇಕು. ಕ್ರೆಡಿಟ್ ಎಕ್ಸಾಗ್ರಾಮೀಣ ಲೀ.ದಲ್ಲಿ ರಿಲೇಶನ್‍ಶೀಫ್ ಆಫೀಸರ್ ಹುದ್ದೆಗೆ ಪಿ.ಯು.ಸಿ. / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ), ಇತ್ತೀಚನ ಭಾವಚಿತ್ರ ಹಾಗೂ ಆಧಾರ್ ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಉದ್ಯೋಗ ಮೇಳದಲ್ಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು.

ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here