ಜೇವರ್ಗಿ: ಈ ಬಾರಿಯ ಬೃಹತ್ ರಾಷ್ಟ್ರೀಯ ಲೋಕ ಅದಾಲತ ನಲ್ಲಿ ಜೇವರ್ಗಿಯ ಹಿರಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದ ಪ್ರಕರಣ ಒಂದರಲ್ಲಿ ಎಂ.ಸಿ:-10/2022ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುರೇಶ್ ಮತ್ತು ಮಂಜುಳತಿಪತಿಗಳಿಬ್ಬರು ಒಂದಾಗಿದ್ದಾರೆ.
ಕೌಟುಂಬಿಕ ಕಲಹದಿಂದಾಗಿ ಬೇರೆಯಾಗಿದ್ದು ನ್ಯಾಯಾಲಯದಲ್ಲಿ ರಾಜೀ ಮಾಡುವ ಮೂಲಕ ಅವರನ್ನು ಒಂದು ಗೂಡಿಸಿ ಒಟ್ಟಿಗೆ ಜೀವನ ನಡೆಸುವಂತೆ ಸಲಹೆ ನೀಡಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಭಿನ್ನಾಭಿಪ್ರಾಯ ಹಾಗೂ ಮನಸ್ಥಾಪದಿಂದಾಗಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವಾಗ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆಯ ನ್ಯಾಯ ದಂಡಾಧಿಕಾರಿಗಳಾದ ಸಂದೀಪ ಎ.ನಾಯಕ ಹಾಗೂ ಸಂಧಾನಕಾರ ಸಲಹೆಗಾರರಾದ ತುಳಜಾರಾಮ ರಾಠೋಡ, ಸೇರಿದಂತೆ ವಕೀಲರಾದ ಕೆ,ಇ ಬಿರಾದಾರ, ರಾಜಶೇಖರ ಶಿಲ್ಪಿ,ಸಿದ್ದು ಕಲ್ಲೂರ,ಸೋಮಶೇಖರ ಸರದಾರ,ರಾಜುಮುದ್ದಡಗಿ,ಪರಶುರಾಮ ಮುದವಾಳ,ಸೇರಿದಂತೆ ನ್ಯಾಯಾಲಯದಲ್ಲಿ ಇತರರು ಉಪಸ್ಥಿತರಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುರೇಶ ಮತ್ತು ಮಂಜುಳ ದಂಪತಿಗಳು ಸಹಬಾಳ್ವೆ ಮಾಡುವುದಾಗಿ ತಿಳಿಸಿದ್ದಾರೆ.ಇವರಿಗೆ ಮೂರು ಜನ ಮಕ್ಕಳಿದ್ದಾರೆ.ಇವರ ಜವಾಬ್ದಾರಿಯನ್ನು ಇಬ್ಬರು ಕೂಡಿ ನಿರ್ವಹಿಸುವುದಾಗಿ ತಿಳಿಸಿದ್ದಾರೆ.