ಕಲಬುರಗಿ ಉಪರಾಜಧಾನಿ ಮಾಡಿ

0
10

ಕಲಬುರಗಿ: ಜಿಲ್ಲೆಯನ್ನು ಉಪ ರಾಜಧಾನಿ ಯನ್ನಾಗಿ ಘೋಷಿಸಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಮೇಘಾ, ಟೆಕ್ಸ್ಟೈಲ್ ಪಾರ್ಕ್ ಆರಂಭಿಸಬೇಕು, ಎರಡನೇ ವರ್ತುಲ ರಸ್ತೆ ನಿರ್ಮಿಸಬೇಕು, ಬೀದರ್ ದಿಂದ ಬಳ್ಳಾರಿ ವರೆಗೆ ಚತುಷ್ಪಥ ಹೆದ್ದಾರಿ ನಿರ್ಮಿಸಬೇಕು, ನಗರದಲ್ಲಿ ಐಟಿಬಿಟಿ ಉದ್ಯಮಕ್ಕೆ ಉತ್ತೇಜನ ನೀಡಬೇಕು, ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಬೇಕು, ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ, ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು, ಮಳಖೇಡ, ಗಾಣಗಾಪುರ, ಸನ್ನತಿಗಳನ್ನು ಪ್ರವಾಸಿ ತಾಣಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ವೇದಿಕೆಯ ಸಂಸ್ಥಾಪಕ ಮುತ್ತಣ್ಣ ನಡಗೇರಿ, ಉದಯಕುಮಾರ ಖಣಗೆ, ಬಾಬು ಮದನಕರ, ಸೂರ್ಯಪ್ರಕಾಶ ಚಾಳಿ, ಅವಿನಾಶ ಕಪನೂರ, ಸಾಗರ ಪಾಟೀಲ್, ಶ್ರವಣ್ ಖಜನದಾರ, ಮಲ್ಲು ಪಾಟೀಲ್, ಮೋಹನ್ ಸಗರ, ಪ್ರವೀಣ, ಜೈಭೀಮ್ ಮಾಳಗೆ, ಶಿವು ಗೋಕುಲ, ಮಹೇಶ ಮಾನೆ, ಅರುಣ ಇನಾಂದಾರ್, ಕುಶಾಲ ಕಪನೂರ, ರಾಣೇಶ ಸಾವಳಗಿ, ಸುನೀಲ್ , ದತ್ತು ಜಮಾದಾರ, ಪ್ರಶಾಂತ ಆಲಗೂಡ, ರವಿ ಕಾಂಬಳೆ, ರಾಹುಲ್ ಗಾಯಕವಾಡ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here