ಸುರಪುರ: ಕೃಷ್ಣೆಗೆ ಬಸವ ಸಾಗರ ಜಲಾಶಯದಿಂದ ೬.೨೫ ಲಕ್ಷ ಕ್ಯೊಸೆಕ್ ನೀರು ಹರಿದುಬಿಟ್ಟಿರುವುದರಿಂದ ತಾಲೂಕಿನ ಶಳ್ಳಿಗಿ, ಚೌಡೇಶ್ವರಿಹಾಳ, ಮುಷ್ಠಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಪ್ರವಾಹ ಊಂಟಾಗಿ ಮನೆಗಳಲ್ಲಿ ನೀರು ನುಗ್ಗಿವೆ ಇದರಿಂದಾಗಿ ಜನರ ಮನೆಗಳು ಮತ್ತು ದಿನಬಳಕೆ ವಸ್ತುಗಳು ಹಾಳಾಗಿ ಜನಜೀವನ ಅಸ್ತವ್ಯಸ್ತವಾಗಿದೆ ರೈತರು ಯಾವುದೆ ಕಾರಣಕ್ಕೂ ಜನರು ಜನರು ಆತಂಕಕ್ಕೆ ಒಳಗಾಗಬಾರದು ನಿಮ್ಮ ನೆರವಿಗೆ ಸರ್ಕಾರ ಸದಾಸಿದ್ದವಾಗಿದೆ ಎಂದು ರಾಯಚೂರು ಲೋಕಸಭಾ ಸದಸ್ಯೆ ಅಮರೇಶ ನಾಯಕ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಗಂಜಿಕೇಂದ್ರಕ್ಕೆ ಭಾನುವಾರ ಭೇಟಿನೀಡಿ ಮಾತನಾಡಿದ ಅವರು ಈ ಪ್ರವಾಹದಿಂದ ಸಾವಿರಾರು ಎಕೆರೆ ಬೇಳೆಗಳು ನಾಶವಾಗಿವೆ ಮತ್ತು ಮೂದಲೆ ಕಳೆದಬಾರಿ ಮಳೆಗಳು ಕೈಕೊಟ್ಟಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಈ ಬಾರಿಯ ಪ್ರವಾಹವು ಗಾಯದ ಮೇಲೆ ಬರೆ ಎಳದಂತಾಗಿದೆ ಈ ಪ್ರವಾಹದಿಂದಾದ ನಷ್ಟವಾಗಿವು ರೈತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ನೆರವಿಗಾಗಿ ವರದಿ ಸಲ್ಲಿಸಲಾಘುವುದು ಎಂದು ಹೇಳಿದರು.
ಇದೆ ಸಂದಂರ್ಭದಲ್ಲಿ ನಿರಾಶ್ರಿತ ಕೇಂದ್ರದಲ್ಲಿ ಸರ್ಕಾರದಿಂದ ಸೂಕ್ತ ವ್ಯವಸ್ಥೆಗಳ ಕುರಿತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ತಹಶಿಲ್ದಾರ ಸುರೇಶ ಅಂಕಲಗಿ ಮತ್ತು ವೈದ್ಯಾಧಿಕಾರಿ ವೆಂಕಪ್ಪ ನಾಯಕ ಅವರೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥಗಳನ್ನು ಕಲ್ಪಿಸುವಂತೆ ಸೂಚಿಸಿದರು ಹಾಗೂ ಇದೆ ಸಮಯದಲ್ಲಿ ನೆರೆಸಂತ್ರಸ್ಥರಿಗೆ ದಿನಬಳಕೆ ವಸ್ತುಗಳ ಕಿಟ್ ವಿತರಿಸಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಸುರೇಶ ಸಜ್ಜನ, ಹೆಚ್.ಸಿ.ಪಾಟೀಲ, ಕೀಶೊರಚಂದ ಜೈನ, ಶಂಕರ ನಾಯಕ, ಶ್ರೀನಿವಾಸ ನಾಯಕ, ಎಪಿಎಂಸಿ ಸದಸ್ಯ ದುರ್ಗಪ್ಪ ಗೋಗಿಕೇರಾ, ಬಲಭೀಮ ನಾಯಕ ಬೈರಿಮರಡಿ, ಸಂದೀಪ ಜೋಷಿ ಸೇರಿದಂತೆ ಇನ್ನಿತರರಿದ್ದರು.