ಕಲಬುರಗಿ: ಸರಕಾರವು ಪ್ರಸ್ತುತ ಆಯಾವ್ಯಯದಲ್ಲಿ ಎನ್ ಪಿ ಎಸ್ ನೌಕರರ ಬಹುದಿನಗಳ ಬೇಡಿಕೆಯಾದ ಎನ್ ಪಿ ಎಸ್ ಅನ್ನು ರದ್ದುಗೊಳಿಸಿ ಒ ಪಿ ಎಸ್ ಜಾರಿಗೊಳಿಸುವ ಕುರಿತು ಯಾವುದೇ ಪ್ರಸ್ತಾವನೆ ಮಾಡದಿರುವುದು ಮತ್ತು ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನುಸ್ಟಾನಕ್ಕಾಗಿ ಹಣ ಕಾಯ್ದಿ ರಿಸದಿರುವುದನ್ನು ಖಂಡಿಸಿ ನಿಶ್ಚಿತ ಪಿಂಚಣಿ ಮರುಸ್ತಾಪನೆಗಾಗಿ ವೋಟ್ ಫಾರ್ ಒಪಿಎಸ್ ಅಭಿಯಾನವನ್ನು ಮತ್ತಷ್ಟು ತೀವ್ರ ಗೊಳಿಸಿ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಪಿ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.