ಕಲಬುರಗಿ; ಮುಂಬರುವ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಪರಿಶೀಲನೆ (ಎಫ್ಎಲ್ಸಿ) ಕಾರ್ಯದ ಪ್ರಯುಕ್ತ ಇದೇ ಫೆಬ್ರವರಿ 21 ರಿಂದ ಮಾರ್ಚ್ 7 ರವರೆಗೆ ಕಲಬುರಗಿಯ ಮಿನಿ ವಿಧಾನಸೌಧ ಕಟ್ಟಡ ಹಾಗೂ ಸುತ್ತಮುತ್ತಲೂ ಯಾವುದೇ ಪ್ರತಿಭಟನೆ, ಮೆರವಣಿಗೆ ಹಾಗೂ ಮನವಿ ಸಲ್ಲಿಸುವುದನ್ನು ನಿರ್ಬಂಧಿಸಿ ಸಿ.ಆರ್.ಪಿ.ಸಿ. ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಯಶವಂತ ವಿ.ಗುರುಕರ್ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.