ಸುರಪುರ: ನಗರದ ಬಸ್ ನಿಲ್ದಾಣ ಬಳಿ ಇರುವ ಕಣ್ವಮಠದಲ್ಲಿ ಮಂಗಳವಾರದಂದು ಶ್ರೀಕೃಷ್ಣದ್ವೈಪಾಯನ ತೀರ್ಥರ ಮಧ್ಯರಾಧನೆಯನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಲಾಯಿತು, ಕಣ್ವಮಠದ ವೀರಘಟ್ಟ ಸಂಸ್ಥಾನದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರು ಸಂಸ್ಥಾನ ಪೂಜೆ ನೆರವೇರಿಸಿದರು, ವೇ.ಮೂ. ಯಾಜ್ಞವಲ್ಕ್ಯ ಜೋಷಿ ಅವರು ವಿಶೇಷ ಉಪನ್ಯಾಸ ನೀಡಿ ವೇದಗಳ ಮಹತ್ವ ಹಾಗೂ ಯೋಗೀಶ್ವರ ಯಾಜ್ಞವಲ್ಕ್ಯರು ಹಾಗೂ ಮಧ್ವಚಾರ್ಯರ ಕುರಿತು ತಿಳಿಸಿದರು.
ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು ನಂತರ ತೀರ್ಥ ಪ್ರಸಾದ ನೆರವೇರಿತು. ಶ್ರೀಕೃಷ್ಣದ್ವೈಪಾಯನತೀರ್ಥ ಸೇವಾ ಸಮಿತಿ ಹಾಗೂ ಶ್ರೀಕೃಷ್ಣದ್ವೈಪಾಯನ ತೀರ್ಥ ಯುವಸೇನೆಯ ಪದಾಧಿಕಾರಿಗಳು ಮಠದ ಭಕ್ತಾದಿಗಳು ಇತರರಿದ್ದರು.
ಪ್ರಾಣೇಶಾಚಾರ್ಯ ಗುಡಿ, ವಿಷ್ಣುಪ್ರಕಾಶ ಜೋಷಿ, ರಾಧಾಕೃಷ್ಣ ಜೋಷಿ, ಶ್ರೀಹರಿರಾವ ಆದೋನಿ, ಅಶೋಕ ಕುಲಕರ್ಣಿ ಹೆಮನೂರು, ಗುರುರಾಜ ಕುಲಕರ್ಣಿ ಚಾಮನಾಳ, ಅಪ್ಪಣ್ಣ ಕುಲಕರ್ಣಿ, ವಿಜಯಕುಮಾರ ಕುಲಕರ್ಣಿ, ಕಲ್ಯಾಣರಾವ ಕೋಠಿಖಾನಿ, ಶ್ರೀನಿವಾಸ ಸಿಂದಗೇರಿ, ದತ್ತು ಕುಲಕರ್ಣಿ, ರಮೇಶ ಕುಲಕರ್ಣಿ, ಖಂಡೇರಾವ ಬೋನಾಳ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.