ಸುರಪುರ: ನಗರದ ರಂಗಂಪೇಟೆಯಲ್ಲಿ ನೂತನ ಸಾರ್ವಜನಿಕ ಗ್ರಂಥಾಲಯವನ್ನು ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ) ವತಿಯಿಂದ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಿಮ್ಮಾಪುರ-ರಂಗಂಪೇಟ ವ್ಯಾಪ್ತಿಯಲ್ಲಿ ಹಲವಾರು ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ಇದ್ದು ಸುತ್ತಲಿನ ಗ್ರಾಮಗಳ ಯುವಕರು ಶಿಕ್ಷಣಕ್ಕಾಗಿ ಪ್ರತಿನಿತ್ಯ ಬರುತ್ತಾರೆ ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ಕಲ್ಪಿಸಿದಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸಲು ಬಡ, ಮಧ್ಯಮ ವರ್ಗಗಳ ಹಾಗೂ ಕಾರ್ಮಿಕರ ಮಕ್ಕಳು ಹಾಗೂ ಯುವಕರಿಗೆ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಲು ತುಂಬಾ ಅನುಕೂಲವಾಗುತ್ತದೆ.
ಈ ಕುರಿತು ಗಂಭೀರವಾಗಿ ತೆಗೆದುಕೊಂಡು ಹೊಸ ಗ್ರಂಥಾಲಯ ಪ್ರಾರಂಭಿಸಬೇಕು ಎಂದು ಕರವೇ ರಂಗಂಪೇಟ ನಗರ ಘಟಕದ ಅಧ್ಯಕ್ಷ ವಿರೇಶ ರುಮಾಲಮಠ ಹಾಗೂ ತಾಲೂಕು ಸಂಘಟನಾ ಕಾರ್ಯದರ್ಶಿ ಮಹ್ಮದ ಹುಸೇನ ಒತ್ತಾಯಿಸಿದ್ದಾರೆ. ಈ ಕುರಿತು ನಗರಸಭೆ ಕಚೇರಿಯ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.