ಕಲಬುರಗಿ; ಕಲ್ಯಾಣ ಕರ್ನಾಟಕ ಪ್ರದೇಶ ಐತಿಹಾಸಿಕ, ಬೌಗೋಳಿಕ, ಸಾಹಿತ್ಯಕ ಹಾಗೂ ಸಾಂಸ್ಕøತಿಕ ದೃಷ್ಟಿಯಿಂದ ಅತ್ಯಂತ ಶ್ರೀಮಂತವಾಗಿರುವ ಪ್ರದೇಶವಾಗಿದ್ದರೂ, ಅಭಿವೃದ್ಧಿ ದೃಷ್ಟಿಯಿಂದ ಈ ಭಾಗ ಈವರೆಗೆ ತೀರಾ ಹಿಂದುಳಿದಿದೆ ಎಂದು ಕಲಬುರಗಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಕಲ್ಯಾಣರಾವ ಪಾಟೀಲ ಹೇಳಿದರು.
ಆಳಂದ ತಾಲ್ಲೂಕಿನ ಜಿಡಗಾ ಕ್ಷೇತ್ರದಲ್ಲಿ ಗುರುವಾರದಿಂದ ಆರಂಭವಾಗಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ನಮ್ಮ ಈ ಭಾಗ ಅμÉ್ಟೂಂದು ಮುಂದುವರಿದಿಲ್ಲ. ಈವರಗೆ ಆಡಳಿತ ನಡೆಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವಜ್ಞೆ, ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಅನ್ನುವುದು ಮರೀಚಿಕೆಯಾಗಿತ್ತು. ಆದರೆ ಸಂವಿಧಾನದ 371 (ಜೆ)ಕಲಂ ಜಾರಿಗೆ ಬಂದ ನಂತರ ಅಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಈ ದಿಸೆಯಲ್ಲಿ ನಮ್ಮ ರಾಜಕಾರಣಿಗಳು ತಮ್ಮ ಬಲವಾದ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಅವರು ತಿಳಿಸಿದರು.
ಜಾತಿ, ಭಾμÉ, ವೇಷ-ಭೂಷಣಗಳ ವೈವಿದ್ಯತೆಯಿಂದ ಕೂಡಿರುವ ಈ ನೆಲ ಭಾμÁ ಬಾಂಧವ್ಯ ಹಾಗೂ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಇಂತಹ ಸಾಮರಸ್ಯದ ನೆಲದಲ್ಲಿ ಸೌಹಾರ್ದತೆಗೆ ಭಂಗ ತರುವ ಕೆಲಸ ಯಾರೂ ಮಾಡಬಾರದು. ನಮ್ಮ ಈಗಿನ ಮನಸ್ಥಿತಿ ಬದಲಾಯಿಸಿಕೊಂಡು ಸರ್ವರು ಕೂಡಿ ಬಾಳುವ ಸ್ವಭಾವವನ್ನು ಬೆಳಸಿಕೊಳ್ಳಬೇಕು ಎಂದರು.
ಈ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಕೆಂಪು ಬಾಳೆ ಹಣ್ಣು, ಜೋಳ, ಸಜ್ಜೆಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು. ಕಲಬೆರಕೆಯ ಆಹಾರ ಪದಾರ್ಥಗಳ ಬದಲಿಗೆ ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದರು.
ಇದೆಲ್ಲದಕ್ಕೂ ಮಿಗಿಲಾಗಿ ಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆ ‘ ಹಣತೆ ಹಚ್ಚುತ್ತೇನೆ’ ಎಂಬಂತೆ ಬದುಕಬೇಕಿದೆ. ಮಾನವೀಯತೆಗೆ ಮಿಡಿವ ಸಾಹಿತ್ಯ ರಚಿಸಬೇಕು. ಜನ ಬದುಕಲೆಂದು ಸಾಹಿತ್ಯ ರಚನೆಯಾಗಬೇಕು ಎಂದು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.