ವಿಜ್ಞಾನ, ಅಕ್ಷರ ಕ್ರಾಂತಿಯಿಂದ ಕನ್ನಡದ ಏಳಿಗೆ ಸಾಧ್ಯ; ಜಿಡಗಾದಲ್ಲಿ ನಡೆದ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

0
151

ಕಲಬುರಗಿ: ಬದಲಾಗುತ್ತಿರುವ ಈ ದಿನಮಾನಗಳಲ್ಲಿ ಕನ್ನಡ ಸ್ಥಿತಿ ಗತಿ ಏನು? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇಕೆ? ನೀರಾವರಿ ಯೋಜನೆಯಿಂದಾಗಿ ಏನು ಪ್ರಯೋಜನಗಳಾಗಿವೆ? ಧರ್ಮ, ಸಾಹಿತ್ಯ ಯಾವ ಕಡೆ ಸಾಗಿದೆ ಎಂಬುದನ್ನು ಕುರಿತು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನೆ, ಚರ್ಚೆ ನಡೆಯಬೇಕು ಎಂದು ಗೋಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಅಭಿಪ್ರಾಯಪಟ್ಟರು.

ಆಳಂದ ತಾಲ್ಲೂಕಿನ ಜಿಡಗಾ ಕ್ಷೇತ್ರದಲ್ಲಿ ಗುರುವಾರ ಆರಂಭವಾದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾμÉ, ನೆಲ, ಜಲ ಕುರಿತು ಚಿಂತಿಸುವುದರಿಂದ ನಮ್ಮ ಸಮಸ್ಯೆ- ಸವಾಲುಗಳನ್ನು ಗುರುತಿಸಬಹುದಾಗಿದೆ ಎಂದರು.

Contact Your\'s Advertisement; 9902492681

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗದ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಕಾಯಾರ್ಂಗ, ಶಾಸಕಾಂಗವನ್ನು ಕಾಯುವ, ಎಚ್ಚರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಭಟ್ಟಿ ಸಾರಾಯಿ ನಿμÉೀಧದಂತೆ, ಸಾರಾಯಿ ಮಾರಾಟ ಕೂಡ ನಿಲ್ಲಬೇಕು, ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು, ಅನಿಷ್ಟ ಪದ್ಧತಿ ನಿಲ್ಲಬೇಕು, ನಾವೆಲ್ಲರೂ ವಿಜ್ಞಾನ, ಅಕ್ಷರ ಕ್ರಾಂತಿಯೆಡೆಗೆ ಸಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಸ್ವಾಮೀಜಿ ಮಾತನಾಡಿ, ಧರ್ಮ, ಸಂಸ್ಕøತಿಯ ಜೊತೆಗೆ ಕನ್ನಡ ಜ್ಯೋತಿಯು ಬೆಳಗುತ್ತಿರುವುದು ಸಂತಸದ ಸಂಗತಿ. ಕನ್ನಡ ಉಳಿದರೆ ನಾವು ಉಳಿಯಲು ಸಾಧ್ಯ. ಕನ್ನಡ ಕೇವಲ ಗ್ರಂಥಸ್ಥವಾಗಿರದೆ, ಹೃದಯಸ್ಥವಾಗಿರಬೇಕು. ಗಡಿ ಭಾಗದಲ್ಲಿ ಕನ್ನಡ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎಂದರು.

ಬೇರೆ ಬೇರೆ ಭಾμÉ ಕಲಿಯಬೇಕು. ಆದರೆ ಕನ್ನಡಕ್ಕೆ ತಾಯಿ ಸ್ಥಾನ ಕೊಡಬೇಕು. ಬರವಣಿಗೆಯಿಂದ ಸಮಾಜ ಪರಿವರ್ತನೆ ಸಾಧ್ಯ. ಕನ್ನಡದ ಹಿಂದಿನ ಸಾಹಿತಿಗಳಿಗೆ ಆತ್ಮಸ್ಥೈರ್ಯ ಇತ್ತು. ಅಂತಹ ಆತ್ಮಸ್ಥೈರ್ಯ ವನ್ನು ಇಂದಿನ ಸಾಹಿತಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಳಿಗೆಗಳ ಉದ್ಘಾಟನೆ ಮಾಡಿದ ಶಾಸಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸುಭಾಷ ಆರ್. ಗುತ್ತೇದಾರ, ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಲೇಖಕ ಡಾ. ಶಿವಶರಣಪ್ಪ ಮೋತಕಪಳ್ಳಿ ಹಾಗೂ ಶಿವರಾಜ ಅಂಡಗಿ ಸಂಪಾದಕತ್ವದ ವಿಜಯ ಕಲ್ಯಾಣ ಸ್ಮರಣ ಸಂಚಿಕೆಯನ್ನು ಗುಲ್ಬರ್ಗ ವಿವಿ ಕುಲಪತಿ ಡಾ.ದಯಾನಂದ ಅಗಸರ ಬಿಡುಗಡೆ ಮಾಡಿ, ಶೈಕ್ಷಣಿಕ ಕೇಂದ್ರಗಳು, ಧಾರ್ಮಿಕ ಕ್ಷೆತ್ರಗಳು ಪರಿವರ್ತನೆ ಕೇಂದ್ರಗಳಾಗಬೇಕು ಎಂದು ತಿಳಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸುಭಾಷಚಂದ್ರ ಕಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಸ್ತಾವಿಕ ಮಾತನಾಡಿದರು.

ಶ್ರೀ ಷಡಕ್ಷರಿ ಶಿವಯೋಗಿ ಡಾ. ಮರುಘರಾಜೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಖಜೂರಿ ಕೋರಣೇಶ್ವರ ಮಠದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಆಳಂದ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಜಿಡಗಾ ಗ್ರಾ.ಪಂ. ಅಧ್ಯಕ್ಷ ಸಿದ್ಧರಾಮ ಯಾದವಾಡ ಮುಖ್ಯ ಅತಿಥಿಗಳಾಗಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕಲ್ಯಾಣರಾವ ಜಿ. ಪಾಟೀಲ ಮಾತನಾಡಿದರು.

ಸಿದ್ಧರಾಮ ಹಂಚಿನಾಳ ಪ್ರಾರ್ಥಿಸಿದರು. ಶಿವರಾಜವಾಂಡಗಿ ಸ್ವಾಗತಿಸಿದರು. ಡಾ. ಚಿದಾನಂದ ಚಿಕ್ಕಮಠ ನಿರೂಪಿಸಿದರು. ಶರಣಬಸಪ್ಪ ಕಾಳೆಕಿಂಗೆ ವಂದಿಸಿದರು. ಶರಣರಾಜ ಚಪ್ಪರಬಂದಿ, ಯಶವಂತರಾಯ ಅಷ್ಟಗಿ ಹಾಗೂ ಎಲ್ಲ ತಾಲ್ಲೂಕು ಕಸಾಪ ಅಧ್ಯಕ್ಷರು ವೇದಿಕೆಯಲ್ಲಿದ್ದರು.

ಗಮನಸೆಳೆದ ಮೆರವಣಿಗೆ; ಸಮ್ಮೇಳನದ ಅಂಗವಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಜಿಡಗಾ ಮಠದವರೆಗೆ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಾಲಾ-ಕಾಲೇಜು ಮಕ್ಕಳು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಡೊಳ್ಳು, ಹಲಗೆ, ಲೇಜಿಮು ಹಾಗೂ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.ಸಮ್ಮೇಳನಾಧ್ಯಕ್ಷ, ಜಿಡಗಾ ಹಾಗೂ ಹಾರಕೂಡ ಶ್ರೀಗಳನ್ನು ಸಾರೋಟಿನಲ್ಲಿ ಕರೆ ತರಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here