ಹೆಚ್.ಐ.ವಿ. ಏಡ್ಸ್ ಪ್ರಮಾಣ ಕಡಿಮೆ ಮಾಡಿದ ಶ್ರೇಯಸ್ಸು ಸಮಾಲೋಚಕರಿಗೆ, ಲ್ಯಾಬ್ ಟೆಕ್ನಿಷಿಯನ್ ಪಾತ್ರ

0
32

ಕಲಬುರಗಿ; ವಿಭಾಗಿಯ ಮಟ್ಟದ ಸಮಾಲೋಚಕ ಮತ್ತು ಲ್ಯಾಬ್ ಟೆಕ್ನಾಲಜಿಸ್ಟ್ ಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ತರಬೇತಿಯ ಮಹತ್ವ ಗುರಿ ಜವಾಬ್ದಾರಿ ಹೊತ್ತುಕೊಂಡು ಹೆಚ್.ಐ.ವಿ. ಏಡ್ಸ್ ಪ್ರಮಾಣ ಕಡಿಮೆ ಮಾಡಿದ ಶ್ರೇಯಸ್ಸು ಸಮಾಲೋಚಕರಿಗೆ ಹಾಗೂ ಲ್ಯಾಬ್ ಟೆಕ್ನಿಷಿಯನ್ ಪಾತ್ರ ಬಹಳ ಪ್ರಮುಖವಾಗಿದೆ ಎಂದು ವಿಭಾಗಿಯ ಜಂಟಿ ನಿರ್ದೇಶಕರ ಕಾರ್ಯಾಲಯ ಜಂಟಿ  ಉಪ ನಿರ್ದೇಶಕರು ಡಾ. ಶಂಕರೆಪ್ಪ ಮೈಲಾರಿ  ಹೇಳಿದರು.

ನಗರದ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ,  ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇಷನ್ ಸೊಸೈಟಿ ಬೆಂಗಳೂರು. ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಎರಡು ದಿನದ ತರಬೇತಿ ಕಾರ್ಯಾಗಾರ ಸಸಿಗೆ ನೀರು ಉಣಿಸುವ  ಮೂಲಕ ಉದ್ಘಾಟಸಿ ಅವರು ಮಾತನಾಡಿದರು.

Contact Your\'s Advertisement; 9902492681

ವಿಭಾಗೀಯ ಮಟ್ಟದ ತರಬೇತಿ ಜಿಲ್ಲೆಯಿಂದ  ಬಂದಂತಹ ಸಮಾಲೋಚಕರು ಹಾಗೂ  ಲ್ಯಾಬ್ ಟೆಕ್ನಿಷಿಯನ್ ಗಳಿಗೆ ಈ  ತರಬೇತಿ ಪಾತ್ರ ಬಹಳ ಪ್ರಮುಖವಾಹಿಸಿದೆ ನಾಲ್ಕು ಬ್ಯಾಚ್ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಈಗಾಗಲೇ ನಿಮ್ಮ ಕರ್ತವ್ಯ ನಿಷ್ಠೆಯಿಂದ ಹೆಚ್ ಐ ವಿ / ಟಿಬಿ ಮುಕ್ತ ಮಾಡಲು ಮಹತ್ವದ ಗುರಿ ಜವಾಬ್ದಾರಿ ನಿಮಗೆ ಶ್ರೀರಕ್ಷೆ ಅಗಲಿದೆ ನಿಮ್ಮ ಶ್ರಮ ಅತ್ಯಂತ ಕಾರಣವಾಗಿದೆ  ಜನರಿಗೆ ಅರಿವು ಮೂಡಿಸಿದ ಕಾರಣದಿಂದ ಹೆಚ್ ಐ ವಿ / ಏಡ್ಸ್ ಪ್ರಮಾಣ ಕಡಿಮೆ ಅಗಿದೆ. ಈ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದು ಹೇಳಿದರು.

ವಿಭಾಗಿಯ ಜಂಟಿ ನಿರ್ದೇಶಕರ ಕಾರ್ಯಾಲಯ ಸಹ ನಿರ್ದೇಶಕರಾದ ಡಾ. ಶರಣಬಸಪ್ಪ ಗಣಜಲಖೇಡ ಮಾತನಾಡಿದರು.  ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಂದ್ರಕಾಂತ ನರಬೋಳಿ ಕಾರ್ಯಾಗಾರದ ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳು ಅಡಿದರು. ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ಜಿ ವಿ ರೆಡ್ಡಿ,  ತರಬೇತುದಾರಾದ ಎಸ್ ಆರ್ ಎಲ್ ಟೆಕ್ನಿಷಿನಲ್ ಆಫೀಸರ್ ಬಿದರ. ಡಾ. ಉಷಾ ಹಂಗರಗಿ ಮತ್ತು ಡಾ. ರೀಮಾ ಹರವಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಜಿಲ್ಲಾ ಎ ಆರ್ ಟಿ ಅಪ್ತ ಸಮಾಲೋಚಕ ಮಲ್ಲಿಕಾರ್ಜುನ ಬಿರಾದಾರ ನಿರೂಪಿಸಿದರು. ಅಕೌಂಟೆಂಟ್ ಅರ್ಚನಾ ಅಣವೇಕರ್  ಸ್ವಾಗತಿಸಿದರು . ಎಲ್ ಟಿ ಜೇವರ್ಗಿ ಶಿವಾನಂದ  ವಂದಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಲ್ಯಾಬ್ ಟೆಕ್ನಿಷಿಯನ್  ಮತ್ತು ವಿಠ್ಠಲ ಉಪ್ಪಾರೆ ,  ಬಾಬರ್. ಜಿಲ್ಲಾ ಕ್ಷಯರೋಗ ಡಿ ಆರ್ ಟಿಬಿ ಟಿಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ,   ಆರೋಗ್ಯ ಕಾರ್ಯಕರ್ತರು ಇತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here