ಕಲಬುರಗಿ: ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿತ್ತು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಲಬುರಗಿ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ, ನೂತನ ವಿದ್ಯಾಲಯ ನೂತನ ವಿದ್ಯಾಲಯ ಜಿಮ್ಬಾನ ಇವುಗಳ ಸಂಯುಕ್ತಾಶ್ರಯದಲ್ಲಿ 19 ವರ್ಷದೊಳಗಿನ ಯುವತಿಯರಿಗಾಗಿ ಕಲಬುರಗಿ ಎನ್. ವ್ಹಿ. ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಮತ್ತು ಮಹಿಳೆಯರಿಗಾಗಿ ಹಗ್ಗ ಜಗಾಟದ ಸ್ಪರ್ಧೆಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಡಿ. ಬದೋಲೆ ಅವರು ಗುರುವಾರ ಚಾಲನೆ ನೀಡಿದರು.
ಜಿಲ್ಲಾ ಕಾರ್ಯಕ್ರಮ ನಿರ್ಮಾಣ ಅಧಿಕಾರಿ ಲೋಹಿತಿ, ಜಿಲ್ಲಾ ವ್ಯವಸ್ಥಾಪಕ ಅರುಣುಕುಮಾರ ಸೇರಿದಂತೆ ತುಕಾರಾಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ ಗಾಯತ್ರಿ, ಹಾಕಿ ತರಬೇತಿದಾರ ಸಂಜಯ್ ಬಾಣದ್, ಆಥ್ಲೆಟಿಕ್ ಕೋಚ್ ಸಂಗಮೇಶ್ ಕೊಂಬಿನ, ಜುಡೋ ಕೋಚ್ ಅಶೋಕ್, ಬಾಸ್ಕೆಟ್ ಬಾಲ್ ಕೋಚ್ ಪ್ರವೀಣ್ ಪುಣೆ, ಮಮತ್, ಸಂಗಮೇಶ ಇದ್ದರು.