ವೀರಾಪೂರು ಗ್ರಾಮದ ಯುವಜನರಿಂದ ನೆರೆ ಸಂತ್ರಸ್ತರಿಗೆ ದವಸ-ಧಾನ್ಯ, ಸಂಗ್ರಹ

0
45

ವೀರಾಪೂರು: ತಾಲೂಕಿನ ನೆರೆ ಪೀಡಿತ ಸಂತ್ರಸ್ತರಿಗಾಗಿ ವೀರಾಪೂರ ಗ್ರಾಮದಲ್ಲಿ ವಿದ್ಯಾರ್ಥಿ-ಯುವಜನರಿಂದ ಆಹಾರ ಧಾನ್ಯ ಸಂಗ್ರಹದಲ್ಲಿ ಮಾಡಲಾಯಿತು.

ತಾಲೂಕಿನ ಕಡದರಗಡ್ಡಿ, ಯಳಗುಂದಿ, ಹಂಚಿನಾಳ, ಯರಗೋಡಿ, ಜಲದುರ್ಗ ಗ್ರಾಮಗಳು ಸೇರಿ ನಾಲ್ಕಾರು ದೊಡ್ಡಿಗಳ ಜನ ಪ್ರವಾಹದ ಪ್ರಹಾರಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಮನೆಮಠಗಳನ್ನು ಕಳೆದುಕೊಂಡು ಜನರ ಬದುಕು ಬೀದಿಪಾಲಾಗಿದೆ. ಸಂತ್ರಸ್ತರ ನೆರವಿಗೆ ಸಾಕಷ್ಟು ಪ್ರಮಾಣದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ದಾನಿಗಳು ದೇಣಿಗೆ, ದಾನ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಾಂತ ದೇನಿಗೆ ಸಂಗ್ರಹಿಸುವ ಕಾರ್ಯ ನಡೆದಿದ್ದು, ವೀರಾಪೂರು ಗ್ರಾಮದಿಂದಲ್ಲೂ ಆಹಾರ ಧಾನ್ಯ ಸಂಗ್ರಹಿಸಿ ರವಾನೆ ಮಾಡಲಾಗುತ್ತಿದೆ.

Contact Your\'s Advertisement; 9902492681

ಗ್ರಾಮದಲ್ಲಿ ಸುಮಾರು 23 ಚೀಲ ದವಸ-ಧಾನ್ಯ ಹಾಗೂ 8 ಸಾವಿರ ಹಣ ಸಂಗ್ರಹವಾಗಿದೆ.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪೂರ, ಎಸ್‌ಎಫ್‌ಐ ಮುಖಂಡರಾದ ಅಮರೇಗೌಡ, ಅಭಿಷೇಕ್, ಬಸಲಿಂಗ, ಮಹೇಶ್, ಯುವ ಮುಖಂಡರಾದ, ಬಸವರಾಜ್, ಹುಚ್ಚರೆಡ್ಡಿ, ಮಲ್ಲಿಕಾರ್ಜುನ್ ಹಿರೇಮಠ್, ಹನುಮಂತ್ರಾಯ, ಕಳಕಪ್ಪ, ಬಾಷಮಿಯಾ, ಶಿವಪುತ್ರ ಬಸಾಪೂರು, ವೆಂಕಟೇಶ್, ಸಲೀಮ್, ರಮೇಶ್ ಕಪಗಲ್ ಮತ್ತಿತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here