ಕಲಬುರಗಿ: ಇಲ್ಲಿನ ವಿಜಯ ವಿದ್ಯಾಲಯ ಮೈದಾನದಲ್ಲಿ ನಡೆದ ಕರವೇ ಕಪ್ ಸೀಸನ್-1 ರ ಕ್ರಿಕೆಟ್ ಟೂರ್ನಾಮೆಂಟ್‍ನಲ್ಲಿ ಫೈನಲ್ ಪಂದ್ಯಾವಳಿಯಲ್ಲಿ ಬಗ್ದಾದ್ ವಾರಿಯರ್ಸ್ ತಂಡ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ವಿಜೇತ ತಂಡಕ್ಕೆ 51 ಸಾವಿರ ನಗದು ಪುರಸ್ಕಾರ, ಟ್ರೋಫಿ ನೀಡಿ ಅಭಿನಂದಿಸಿದರು. ಅದೇ ರೀತಿ ರನ್ನರ್ ಆಫ್ ಪ್ರಶಸ್ತಿಗೆ ಭಾಜನರಾದ ಯಂಗ್ ಸ್ಟಾರ್ ಸಿಸಿ ತಂಡಕ್ಕೆ 25 ಸಾವಿರ ನಗದು, ಪುರಸ್ಕಾರ ನೀಡಿದರು.
ಇದಕ್ಕೂ ಮುನ್ನ ನಿಗದಿತ 8 ಓವರ್‍ಗಳಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಯಂಗ್ ಸ್ಟಾರ್ ಸಿಸಿ ತಂಡವು ಸರ್ವ ವಿಕೆಟ್ ಪಡೆದುಕೊಂಡು 46 ರನ್ ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬಗ್ದಾದ್ ವಾರಿಯರ್ಸ್ ತಂಡ ಐದು ವಿಕೆಟ್ ನಷ್ಟದೊಂದಿಗೆ 47 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು. ಒಟ್ಟು ನಾಲ್ಕು ದಿನ ಪಂದ್ಯಾವಳಿಯಲ್ಲಿ 8 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು.
ರಾಜಕೀಯ ಧುರೀಣ ರವಿ ಬಿರಾದಾರ, ಎಪಿಎಂಸಿ ಮಾಜಿ ಅಧ್ಯಕ್ಷ ಅಪ್ಪು ಕಣಕಿ, ಉದ್ದಿಮೆದಾರ ಜಸವೀರ ಸಿಂಗ್, ಕಾರ್ಯಕ್ರಮ ಸಂಯೋಜಕ ಹಾಗೂ ಕರವೇ ನಗರ ಪ್ರಧಾನ ಕಾರ್ಯದರ್ಶಿ ಸುರೇಶ ಜಿ. ಹೊಸಮನಿ, ಕರವೇ ತಾಲೂಕು ಅಧ್ಯಕ್ಷ ಆನಂದ ದೊಡ್ಮನಿ ಮತ್ತಿತರರಿದ್ದರು.