ಕಲಬುರಗಿ: ಪರೀಕ್ಷೆಗಳನ್ನು ಸಂಭ್ರಮವನ್ನಾಗಿ ಸ್ವೀಕರಿಸೋಣ ಸತತ ಅಧ್ಯಯನದ ಮೂಲಕ ಈ ಪರೀಕ್ಷೆಗಳಲ್ಲಿ ಪಾಸಾಗುವುದು ಹಾಗೂ ಈ ಪರೀಕ್ಷೆಗಳ ಮೂಲಕವೇ ಜೀವನದಲ್ಲಿ ಯಶಸ್ಸು ಸಾಧಿಸುವುದು ಇಂದಿನ ಅಗತ್ಯವಾಗಿದೆ. ಹತ್ತನೇ ತರಗತಿ ಶೈಕ್ಷಣಿಕ ಬದುಕಿನಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಪರೀಕ್ಷೆಗಳು ಹತ್ತಿರವಿದ್ದು ಸರಿಯಾದ ಸಮಯ ಪಾಲನೆ ಮಾಡಿ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ ಎಂದು ಪ್ರಜ್ಞಾ ಫೌಂಡೇಶನ್ ನ ನಿರ್ದೇಶಕರಾದ ಕೆ.ಎಂ. ವಿಶ್ವನಾಥ ಮರತೂರ ಹೇಳಿದರು.
ಅವರು ಇಂದು ಸರ್ಕಾರಿ ಪ್ರೌಢಶಾಲೆ ಮರತೂರ ಇಲ್ಲಿ ಪರೀಕ್ಷಾ ಸಂಭ್ರಮ ಪರೀಕ್ಷೆ ಕುರಿತು ಭಯ ಬೇಡಾ ಭರವಸೆ ಇರಲಿ ಎನ್ನುವ ವಿಶಿಷ್ಟ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಕ್ಕಳಿಗಾಗಿ ಪರೀಕ್ಷೆ ಎಂದರೇನು? ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತದೆ. ಪರೀಕ್ಷೆಗಳ ಬಗ್ಗೆ ಆಸಕ್ತಿ ಪರೀಕ್ಷೆಯಲ್ಲಿ ಹೇಗೆ ಬರೆಯಬೇಕು? ಸಮಯಪಾಲನೆ ಹೇಗೆ ಮಾಡಬೇಕು? ಅತಿ ಹೆಚ್ಚು ಅಂಕಗಳ ಗಳಿಸುವ ದಾರಿಗಳು ಯಾವವು? ಓದಿನ ಮಹತ್ವ ಜೀವನದಲ್ಲಿ ಪರೀಕ್ಷೆಗಳ ಮಹತ್ವ ಇತ್ಯಾದಿ ಅಂಶಗಳನ್ನು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಾರ್ಯಗಾರದ ಮೂಲಕ ತಿಳಿಸಿಕೊಟ್ಟರು.
ಈ ಕಾರ್ಯಗಾರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಹಾಜರಿದ್ದು ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ಹಾಜರಿದ್ದು ಸಹಕಾರ ನೀಡಿದರು.