ಕಲಬುರಗಿ: ಜೇವರ್ಗಿ ಪಟ್ಟಣದ ಜನತೆಗೆ ಹೊಸ ತರಕಾರಿ ಮಾರುಕಟ್ಟೆ ಸವಲತ್ತು ಲಭ್ಯವಾಗಿದೆ. ಕೆಕೆಆರ್‍ಡಿಬಿ ಅನುದಾನದಲ್ಲಿ 1. 50 ಕೋಟಿ ವೆಚ್ಚದಲ್ಲಿ ಹೊಸ ತರಕಾರಿ ಮಾರುಕಟ್ಟೆ ಸಂಕೀರ್ಣ ಇಲ್ಲಿನ ಹಳೆ ಬಸ್ ನಿಲ್ದಾಣದ ನಿವೇಶನದಲ್ಲಿ ತಲೆ ಎತ್ತಿದೆ.
ಸಸಜ್ಜಿತವಾದಂತಹ 140 ಕ್ಕೂ ಹೆಚ್ಚು ಕಟ್ಟೆಗಳು ನಿರ್ಮಾಣ ಮಾಡಲಾಗಿದ್ದು ಇದರಲ್ಲಿ ಕುಳಿತು ವರ್ತಕರು ತರಕಾರಿ ಮಾರಲು ಅನುಕೂಲ ಮಾಡಿಕೊಡಲಾಗಿದೆ. ಜೊತೆಗೇ ಇದೇ ಮಾರುಕಟ್ಟೆ ಸಂಕೀರ್ಣದಲ್ಲಿ ಮಳಿಗೆಗಳು ಲಭ್ಯವಿದ್ದು ಇಲ್ಲಿ ದಿನಸಿ ಇತರೆ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜೇವರ್ಗಿ ಶಾಸಕರು, ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್ ಅವರು ಹೊಸದಾಗಿ ನಿರ್ಮಾಣ ಮಾಡಲಾದ ಸುಮಾರು 1 ಕೋಟಿ 50 ಲP್ಷÀ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ಪಟ್ಟಣದ ಜನತೆಗೆ, ವರ್ತಕರಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಅಜಯ್ ಸಿಂಗ್ ಅವರು ತರಕಾರಿ ಮಾರುಕಟ್ಟೆ ಹೊಸ ಸಮುಚ್ಚಯದಿಂದ ತರಕಾರಿ ಕೊಳ್ಳಲು ಬರುವ ಜನತೆಗೂ, ತರಕಾರಿ ವತಕರಿಗೂ ಹೆಚ್ಚಿನ ಅಉಕೂಲವಾಗಲಿದೆ. ಬರುವ ದಿನಗಳಲ್ಲಿ ಜೇವರ್ಗಿಯಲ್ಲಿ ತರಕಾರಿ ಒಂದೇ ಸ್ಥಳದಲ್ಲಿ ಲಭ್ಯವಾಗಲಿದ್ದು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಪP್ಷÀದ ಹಿರಿಯ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀರಾದ ರುಕ್ಕುಮ್ ಪಟೇಲ್ ಸಿದ್ದಲಿಂಗ ರೆಡ್ಡಿ ಇಟಗ ಕಾಂಗ್ರೆಸ್ ಪP್ಷÀದ ಮುಖಂಡರಾದ ಕಾಶೀಮ್ ಪಟೇಲ್ ಮೂದಬಾಳ್, ರಾಜಶೇಖರ್ ಸಿರಿ, ರಹಮಾನ್ ಪಟೇಲ್ , ನೀಲಕಂಠ ಅವುಂಟಿ ಶೌಕತ್ ಅಲಿ ಆಲೂರು ಚಂದ್ರಶೇಖರ್ ಹರ್ನಾಳ ಬಹುದ್ದೂರ್ ರಾಥೋಡ್ ಶಿವೂ ಕ¯್ಲÁ, ಮಾಜಿದ್ ಶೇಟ್, ಅಜ್ಜುಲಕಪತಿ ಅ¯್ಲÁ ಭP್ಷÀ, ಡಿ ಕೆ, ಯುನುಸ್ ಹಾಡ್ವೇರ್ರ, ಮರಿಯಪ್ಪ ಸರಡಗಿ ಬಸರಾಜ್ ಲಾಡಿ,ರುಕ್ಕುಮ್ ತೊಲಾ,ರಿಯಾಜ್ ಕಾಶಿಮ್ ಪಟೇಲ್,ಇಮ್ರಾನ್, ರಫೀಕ್ , ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.