ಮಾ.24ರಿಂದ ಕಲ್ಯಾಣದ ಮೊದಲ ಅತಿರುದ್ರಯಾಗ

0
16

ಕಲಬುರಗಿ: ಸರ್ವ ಜನತೆಯಲ್ಲಿ ಶಾಂತಿ ನೆಮ್ಮದಿಗಾಗಿ, ಭವದ ಬೇಗೆ ಕಳೆದು ಜನಕಲ್ಯಾಣಕ್ಕಾಗಿ ಯಾದಗಿರಿ ಜಿಲ್ಲೆಯ ಅಬ್ಬೆ ತುಮಕೂರಿನಲ್ಲಿ ಮಾ. 24ರಿಂದ 31ರವರೆಗೆ ಅತಿರುದ್ರಯಾಗ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಲ್ಯಾಣ ಜಿಲ್ಲೆಯಲ್ಲಿ ಬರುವ ಕರ್ನಾಟಕ ಆಂಧ್ರ ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಲಕೋಪಲಕ್ಷ ಭಕ್ತವೃಂದ ಸಾಗರೋಪಾದಿಯಲ್ಲಿ ಹರಿದು ಬರುತ್ತದೆ. ವಿಶ್ವಾರಾಧ್ಯಾರ ದರ್ಶನಾರ್ಶಿವಾದ ಭವ ಚಿಂತೆಯನ್ನು ದೂರ ಮಾಡಿಕೊಂಡು ಭವ ರೋಗ ಆಳಿಸಿಕೊಂಡು ಅಂತರಂಗ ಶುದ್ಧಿಗೊಳಿಸಿಕೊಂಡು ಪುಣ್ಯಾತ್ಮರಾಗುತ್ತಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಪ್ರತಿ ವರ್ಷಕೊಮ್ಮೆ ಐದು ಕಾಲ ನಡೆಯುವ ಜಾತ್ರೆ ನೋಡಲು ಸಾಲವು. ಲಕ್ಷಾವಧಿ ಭಕ್ತಿಯಿಂದ ಆಗಮಿಸಿ ಶೃದ್ಧೆಯಿಂದ ರಥೋತ್ಸವದಲ್ಲಿ ಪಾಲ್ಗೊಂಡು ಪವಿತ್ರಾತ್ಮರಾಗುವರು ಎಂದರು.

ವಿಶ್ವಾರಾಧ್ಯರ ಪ್ರತಿμÁ್ಠಪನೆ ಅಂಗವಾಗಿ ತುಮಕೂರ ಹನ್ನೊಂದು ವರ್ಷಗಳಿಗೊಮ್ಮೆ ಭವ್ಯವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಪರಂಪರಾನುಗತವಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಜೀವಿತಾವಧಿಯಲ್ಲಿ ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿμÁ್ಠಪನೆ ಮಂಗಲ, ಪೂಜೆ, ಅಷ್ಟ ಮಂಗಳ ಲಕ್ಷ್ಮೀ ಕುಬೇರ ಪೂಜೆ ಮುಂತಾದ ಹಲವು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ 2013 ನಡೆಸಿದ 770 ಅಮರಗಣಂಗಳ ಮಹಾಮಂಟಪ ಪೂಜೆ, ಸ್ಮರಣಾರ್ಥವಾಗಿ ಅಡಿ ಎತ್ತರದ ಮಂದಿರ ಮತ್ತು ವಿಶ್ವಾರಾಧ್ಯರ ಮೂರ್ತಿ ಪ್ರತಿμÁ್ಠಪನೆ ಲೋಕಾರ್ಪಣೆ ತನಿಮಿತ್ತ ಸಾವಿರಾರು ತುಂಬುವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಬ್ಬೆತುಮಕೂರ ಸಜ್ಜುಗೊಳ್ಳುತ್ತಿದೆ ಎಂದು ಹೇಳಿದರು.

ಮಾರ್ಚ್ 24ರಂದು ಮಧ್ಯಾಹ್ನ 2 ಗಂಟೆಗೆ ಸುಮಂಗಲ ಮಡೆಯನ್ನು ನೇರವೇರಿಸಲಾಗುವುದು. ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಾಯಂಕಾಲ 18 ವಿಶ್ವಾರಾಧ್ಯರ ತೊಟ್ಟಿಲೋತ್ಸವವನ್ನು ನೇರವೇರಿಸಲಾಗುವುದು ಎಂದರು.

ಮಾರ್ಚ್ 25ರಂದು 8-30ಕ್ಕೆ ಅತಿರುದ್ರಯಾಗ ನೇರವೇರುವುದು ಶ್ರೀಶೈಲ, ರಾಮನಗರ, ತಿರುಪತಿಗಳಿಂದ ಆಗಮಿಸುವ 156 ಜನರ ಯತ್ನಜರು ಪೌರೋಹಿತ್ಯವನ್ನು ವಹಿಸುವರು. 108 ಹೋಮ ಕುಂಡಗಳಲ್ಲಿ ದಂಪತಿಗಳಿಂದ ಅತಿ ರುದ್ರಯಾಗವನ್ನು ನೇರ ವೇರಿಸಲಾಗುವುದು. ಅಷ್ಟ ಮಂಗಲ ಕುಬೇರ ಪೂಜೆಯನ್ನು ದಂಪತಿಗಳು ನಡೆಸಿಕೊಡುವರು ಎಂದರು.

ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ಡಾ. ಅಜಯ್ ಸಿಂಗ್, ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ್ ಮೆತ್ತಿಕೊಂಡು ಹಾಗೂ ಮಾಜಿ ಶಾಸಕ ಗುರು ಪಾಟೀಲ್, ಡಾ. ಸುಭಾಶ್ಚಂದ್ರ ಹಾಗೂ ಸಿದ್ದಣ್ಣಗೌಡ ಪಾಟೀಲ ಮಳಗಿ ಕಲಬುರಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here