ಶ್ರೀಶೈಲಂನಲ್ಲಿ ಯುಗಾದಿ ಮಹೋತ್ಸವ ಹಾಗೂ ದಾಸೋಹ ಭವನ ಉದ್ಘಾಟನೆ

0
21

ಕಲಬುರಗಿ: ಜಗದ್ಗುರು ಸಾರಂಗಧರ ರಾಷ್ಟ್ರೀಯ ಸೇವಾ ಸಮಿತಿಯಿಂದ ಮಾ.19ರಿಂದ 22ರ ವರೆಗೆ ಶ್ರೀಶೈಲಂದಲ್ಲಿ ಯುಗಾದಿ ಮಹೋತ್ಸವ ಹಾಗೂ ದಾಸೋಹ ಭವನ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲಂ ಸಾರಂಗ ಮಠದ ಪೀಠಾಧಿಪತಿ ಡಾ.ಸಾರಂಗಧರ ದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾ.19ರಂದು ಸಂಜೆ 7ಕ್ಕೆ ನಿಡುಮಾಮಿಡಿ ಜಗದ್ಗುರು ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಮಹಾಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ ದಾಸೋಹ ಭವನ ಉದ್ಘಾಟನೆ ಮಾಡಲಿದ್ದಾರೆ.

Contact Your\'s Advertisement; 9902492681

ಎಂಎಲ್ಸಿ ಬಿ.ಜಿ.ಪಾಟೀಲ್ ಅವರು ಜ್ಯೋತಿ ಬೆಳಗಿಸಲಿದ್ದಾರೆ. ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಸಮಾಜ ಸೇವಕ ಗೌಸ್ ಬಾಬಾ, ಪತ್ರಕರ್ತರಾದ ಬಾಬುರಾವ್ ಯಡ್ರಾಮಿ, ದೇವಯ್ಯ ಗುತ್ತೇದಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ದರ್ಜೆ ಗುತ್ತಿಗೆದಾರ ದೇವಿಂದ್ರಪ್ಪಗೌಡ ಗೌಡಗೇರಿ ಅವರನ್ನು
ಸತ್ಕರಿಸಲಾಗುವುದು ಎಂದರು.

ದಾಸೋಹ ಭವನದಲ್ಲಿ ಮಾ.19ರಿಂದ 22ರ ವರೆಗೆ ನಿತ್ಯ 10 ರಿಂದ 12 ಸಾವಿರಕ್ಕೂ ಅಧಿಕ ಜನರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಇರಲಿದೆ. ಆದೋನಿಯಿಂದ ಅಡುಗೆ ಮಾಡುವವರನ್ನು ಕರೆಸಲಾಗಿದೆ ಎಂದು ಹೇಳಿದರು.

ಮಾ.22 ರಂದು ಬೆಳಗ್ಗೆ 10ಕ್ಕೆ ಯುಗಾದಿ ದಿನದಂದ ಜಗದ್ಗುರು ಪರಮಶಿವ ರಾಜದೇಶಿಕೇಂದ್ರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿμÉೀಕ, ಶಿವಾμÉ್ಟೂೀತ್ತರ ನಾಮಾವಳಿ, ಮಹಾ ಮಂಗಳಾರತಿ ಜರುಗಲಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here