ಕಲಬುರಗಿ; ಮಹಾನಗರ ಪಾಲಿಕೆಯ ಡೇ-ನಲ್ಮ್ ಯೋಜನೆಯಡಿ ಸ್ವ-ನಿಧಿ ಮಹೋತ್ಸವದ ಅಂಗವಾಗಿ ಕಿರು ಆಹಾರ ಸಂಸ್ಕರಣದಲ್ಲಿ ತೊಡಗಿರುವ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣ ಪಕ್ಕದ ಜಿಡಿಎ ಗಾರ್ಡನ್‍ದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಹಾರ ಮೇಳವನ್ನು ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ ಅವರು ಬುಧವಾರ ಉದ್ಘಾಟಿಸಿದರು.
ಈ ಆಹಾರ ಮೇಳದಲ್ಲಿ ನಗರದ ಪ್ರಮುಖ ಸ್ಥಳಗಳ ಬಗೆ ಬಗೆಯ ಆಹಾರ ಪದಾರ್ಥ ತೈಯಾರಿಸುವ ವ್ಯಾಪಾರಿಗಳು ಪಾಲ್ಗೊಂಡಿದರು.
ಈ ಸಂದರ್ಭದಲ್ಲಿ ಸಮುದಾಯ ವ್ಯವಹಾರಿಕ ಅಧಿಕಾರಿಗಳಾದ ವಿಜಯಲಕ್ಷ್ಮೀ ಪಟ್ಟೆದಾರ್, ಟಿ.ವಿ.ಸಿ. ಸದಸ್ಯರಾದ ಸಾಬೀರ್ ಹಾಗೂ ಡೇ ನಲ್ಮ್ ಶಾಖೆಯ ಶಕೀಲ ಗುನ್ನಾಪುರ, ನಾಗಮ್ಮ ಸಿ. ಬೆನಕನಳ್ಳಿ, ಮಾಣಿಕ ಬಾಳುವಾಲೆ, ಫಯಾಜ್ ಯಾಕಾಪುರ ಹಾಗೂ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.