ಇ.ಡಬ್ಲೂ. ಎಸ್. ಜಾರಿಗೆಗಾಗಿ ಒತ್ತಾಯಿಸಿ ಬ್ರಾಹ್ಮೀಣ ಆರ್ಗನೇಷನ್ ಧರಣಿ

0
18

ಕಲಬುರಗಿ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಗುರುವಾರ ಮುಂಜಾನೆ ಬ್ರಾಹ್ಮೀಣ ಆರ್ಗನೇಷನ್ ಆಫ್ ಇಂಡಿಯಾ ಕಲಬುರಗಿ ಜಿಲ್ಲಾ ಸಂಘದಿಂದ ರಾಜ್ಯದಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ10% ಮೀಸಲಾತಿಯ (ಇ.ಡಬ್ಲು.ಎಸ್) ನೀಡಲು ಒತ್ತಾಯಿಸಿ ಒಂದು ದಿನ ಸಾಂಕೇತಿಕ ಧರಣಿ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 10% ಮೀಸಲಾತಿ ಜಾರಿಗೆ ತಂದು ಈಗಾಗಲೇ ನಾಲ್ಕು ವರ್ಷಗಳಾಗಿವೆ. ರಾÀಜ್ಯದಲ್ಲಿ ಇ .ಡಬ್ಲೂ. ಎಸ್. ಜಾರಿಗೆ ತರಲು ರಾಜ್ಯ ಸರಕಾರ ವಿಳಂಬ ಮಾಡುತ್ತಿರುವುದು ರಾಜ್ಯ ವಿಪ್ರ ಸಮಾಜದಲ್ಲಿ ಅಸಮಾಧಾನಕ್ಕೆ ಎಡೆ ಮಾಡಿ ಕೊಟ್ಟಿದೆ ಇದರಂದ ರಾಜ್ಯ ಸರಕಾರವನ್ನು ವಿಪ್ರ ಸಮುದಾಯ ಈ ವಿಷಯ ಕುರಿತು ವಿರೋಧವ್ಯಕ್ತಪಡಿಸುತ್ತದೆ.

Contact Your\'s Advertisement; 9902492681

ಬರುವಂತಹ ವಿಧಾನ ಸಭಾ ಚುನಾವಣೆಯಲ್ಲಿ ಮೀಸಲಾತಿ ನೀಡದ ರಾಜ್ಯ ಸರಕಾರದ ಮೇಲೆ ಇದರ ಪರಿಣಾಮ ಬೀರುವಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಗೆಯಾಗುವದರೊಳಗೆ ಇ .ಡಬ್ಲೂ. ಎಸ್. ಜಾರಿಗೆಯಾಗದಿದ್ದರೆ, ಬರುವ ವಿಧಾಸಭಾ ಚುನಾವಣೆಯಲ್ಲಿ ನಮ್ಮ ಸಂಘಟನೆಯು ರಾಜ್ಯಾದಂತ್ಯ ವಿಪ್ರರಿಗೆ ಜಾಗೃತಿ ಮೂಡಿಸುವ ಮೂಲಕ ಸರಕಾರಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದೇವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇ .ಡಬ್ಲೂ. ಎಸ್. ಜಾರಿಗೊಳಿಸಿದ್ದನ್ನು ಯಥಾವತ್ತಾಗಿ ರಾಜ್ಯ ಸರಕಾರ ಯಾವುದೇ ತಿದ್ದುಪಡಿ ಇಲ್ಲದೆ ಜಾರಿಗೊಳಿಸಲು ಬಿಒಐ ಸಂಘಟನೆ ಒತ್ತಾಯಿಸುತ್ತದೆ.

ಕಂದಾಯ ಸಚಿವರು, ಕಾನೂನು ಮತ್ತು ಸಂಸದೀಯ ಸಚಿವರು, ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಪತ್ರದ ಪ್ರತಿ ಸಲ್ಲಿದ್ದಾರೆ.
ಜಿಲ್ಲಾ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ರಾಜ್ಯಾಧಕ್ಷ ರವೀಂದ್ರ ಕುಲಕರ್ಣಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಚಕ್ರವರ್ತಿ, ನೂರಾರು ವಿಪ್ರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here