ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಕೇಂದ್ರ ಸಮಿತಿ ವತಿಯಿಂದ ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ರಾಜ್ಯ ಸಮಿತಿಗೆ ಕಲ್ಯಾಣ ವಲಯ ಕೇಂದ್ರ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಗಣ್ಯರಿಂದ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯವರ ಸಮುಖದಲ್ಲಿ ಸೇಡಮ್ ಘಟಕದ ಸಾರಿಗೆ ನಿಯಂತ್ರಕರಾದ ಶ್ರೀ ಅಂಬರಾಯ ಹಂಗರಗಿ ರವರನ್ನು ಕಲಬುರಗಿ ವಿಭಾಗ-1 ಅಧ್ಯಕ್ಷರನ್ನಾಗಿ ಹಾಗೂ ಸೂರ್ಯಕಾಂತ್ ಸಾಗರ ವಿಭಾಗೀಯ ಕಾರ್ಯಗಾರ ವಿಭಾಗ -01 ರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ಎನ್ ರವೀಂದ್ರ, ರಾಜ್ಯ ಕಾರ್ಯಧ್ಯಕ್ಷ ಎ ಸೊಮ್ಮಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬರಗೂರು, ರಾಜ್ಯ ಹಿರಿಯ ಉಪಾಧ್ಯಕ್ಷ ಕಾಟಯ್ಯ, ಬಿಎಂಟಿಸಿ ಅಧ್ಯಕ್ಷ ಕನಕಪ್ಪ, ರಾಜ್ಯ ಮಹಿಳಾ ಕಾರ್ಯದರ್ಶಿ ಅರುಣಾಕ್ಷಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ರಾಜಕುಮಾರ ಯಕ್ಕಂಚಿ ವಹಿಸಿಕೊಂಡಿದ್ದರು. ಹುಬ್ಬಳ್ಳಿ ವಲಯ ಪ್ರಧಾನ ಕಾರದರ್ಶಿ ಎ.ಟಿ. ಯಾವಗಲ್ ಇದ್ದರು. ಕಲ್ಯಾಣ ವಲಯ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ನ್ಯಾಮನ ಕಾರ್ಯಕ್ರಮದ ಸ್ವಾಗತಿಸಿದರು. ಶ್ರೀನಿವಾಸ ತುಮಕೂರ ನಿರುಪಿಸಿದರು.