ಕಲಬುರಗಿ: ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಹೈದ್ರಾಬಾದ ಕರ್ನಾಟಕ ಕೋಲಿ ಸಮಾಜ ಕರ್ನಾಟಕ ಕೋಲಿ ಕಬ್ಬಲಿಗ ಸಂಘರ್ಷ ಸಮಿತಿಯಿಂದ ನಗರದ ಜಗತ್ ವೃತ್ತದಿಂದ ತಹಶೀಲ್ದಾರ ಕಚೇರಿಯವರಗೂ ಉರುಳುಸೇವೆ ನಡೆಸಿ ಮನವಿ ಸಲ್ಲಿಸಲಾಯಿತು.
ನಿಂಗಪ್ಪ ದೇವಣಗಾಂವ್, ಸಿದ್ದು (ಗೌತಮ್) ಜಮಾದಾರ, ದಿಗಂಬರ ಮಾಗಣಗೇರಿ, ಅಮೃತ ಡಿಗ್ಗಿ, ಸಂತೋಷ ಬೆಣ್ಣೂರ ಸೇರಿದಂತೆ ಹಲವರು ಪಾಲ್ಗೊಂಡರು.