ಕಲಬುರಗಿ: ನಗರದ ಸುಪರ್ಮಾರ್ಕೆಟ್ ಸಿಟಿಬಸ್ ನಿಲ್ದಾಣದ ಬಳಿ ಕೆಕೆಆರ್ ಡಿಬಿ ಪ್ರಾದೇಶಿಕನಿಧಿ ಅಡಿ 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಅಭಿವೃದ್ಧಿ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಅಡಿಗಲ್ಲು ಹಾಕಿದರು.
ಈ ಸಂದರ್ಭದಲ್ಲಿ ರಾಜಶೇಖರ ಶಿವಾಚಾರ್ಯರು, ಸಿದ್ದರಾಮಾನಂದಪುರಿ ಸ್ವಾಮೀಜಿ, ಲಿಂಗಬೀರದೇವರು, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಡಾ.ಬಿ.ಜಿ ಪಾಟೀಲ, ಶಶೀಲ ನಮೋಶಿ, ಪಾಲಿಕೆ ಸದಸ್ಯರಾದ ರೇಣುಕಾ ರಾಮುರೆಡ್ಡಿ ಗುಮ್ಮಟ, ಗುರುರಾಜ ಪಟ್ಟಣ, ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ರಮೇಶ ಆಲಗೂಡ, ನಿಂಗಣ್ಣ ಮತ್ತಿಮೂಡ, ರವಿ ಪೂಜಾರಿ ಜಂಬಗಾ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.