ಸಂಶೋಧನೆಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ: ಪ್ರೊ ಅನಿಲಕುಮಾರ ಬಿಡವೆ

0
59

ಕಲಬುರಗಿ: ವಿಶ್ವವಿದ್ಯಾಲಯಗಳು ಕೈಗೊಳ್ಳುವ ಸಂಶೋಧನೆಗಳು ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕು. ಯಾವುದೇ ಪ್ರದೇಶದ ಸಮಸ್ಯೆಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿ ಶಿಸ್ತಿನ ಸಂಶೋಧನೆ ಮಾಡಿದರೆ ಪರಿಹಾರ ದೊರಕುವುದು ಎಂದು ಶರಣ ಬಸವ ವಿವಿಯ ಕುಲಸಚಿವ ಪ್ರೊ. ಅನಿಲಕುಮಾರ ಬಿಡವೆ ಅಭಿಪ್ರಾಯಪಟ್ಟರು.

ಕೆಬಿಎನ್ ವಿಶ್ವವಿದ್ಯಾಲಯ ಹಮ್ಮಿಕೊಂಡ ಎರಡು ದಿನದ ರಾಜ್ಯಮಟ್ಟದ ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನ AMAPSS-2023 ರ ಅನ್ವಯಿಕ ಗಣಿತದ ಕುರಿತು ರಾಜ್ಯ ಮಟ್ಟದ ಅಂತರ ಶಿಸ್ತಿನ ಸಂಶೋಧನಾ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ರಾಷ್ಟ್ರೀಯ ಶಿಕ್ಷಣ ನೀತಿ 2020 ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಯೋಜನೆಗಳನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಬಹು ಶಿಸ್ತಿನ ವಿವಿಗಳು ತುಂಬಾ ಫಲಶ್ರುತಿಯಾಗಿವೆ. ದೇಶದಲ್ಲಿ ಬಹು ಶಿಸ್ತಿನ ವಿವಿಗಳು ತುಂಬಾ ವಿರಳ. ಕಲಬುರ್ಗಿಯ ಎರಡು ಕಣ್ಣುಗಳತಿದ್ದ ಕೆಬಿಎನ್ ಮತ್ತು ಶರಣ ಬಸವ ವಿವಿ ತನ್ನದೇ ಶೈಲಿಯಲ್ಲಿ ಶಿಕ್ಷಣ ರಂಗದ ವಿಶಿಷ್ಟ ಸೇವೆಯಲ್ಲಿ ನಿರಂತರವಾಗಿ ತೊಡಗಿವೆ. ಕೆಬಿಎನ್ ವಿವಿ ಹಮ್ಮಿಕೊಂಡ ಈ ಕಾರ್ಯಗಾರ ವಿದ್ಯಾರ್ಥಿಗಳಿಗೆ ನವ ವಿಷಯದ ಜ್ಞಾನವನ್ನು ಒದಗಿಸುತ್ತವೆ ಎಂದರು.

ಸಮಾರಂಭದ ಗೌರವ ಅತಿಥಿಗಳಾದ ಕೇಂದ್ರೀಯ ವಿವಿಯ ಗಣಿತ ವಿಭಾಗದ ಮುಖ್ಯಸ್ಥ ಡಾ. ಜನಾರ್ಧನ್ ರೆಡ್ಡಿ ಇವರು ಭೌತ ಶಾಸ್ತ್ರ ಮತ್ತು ಗಣಿತ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರ ಬಹಳ ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ ಇದರ ಅನುಕೂಲಗಳಿವೆ. ಬೇರೆ ವಿಷಯದಲ್ಲೂ ಆಸಕ್ತಿ ಹೊಂದಬೇಕು ಹಾಗೂ ಒಳ್ಳೆಯ ಸಂಶೋಧನೆಗಳನ್ನು ಮಾಡಿ ಮಾತೃ ಸಂಸ್ಥೆಗೆ ಹೆಸರು ತರಬೇಕು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ನಿಶಾತ ಆರೀಫ್ ಹುಸೇನಿ ಮಾತನಾಡಿ ಕೆಬಿಎನ್ ವಿವಿಧ ವಿಭಾಗಗಳು ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಗಾರ ಹಾಗೂ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಿದೆ. ಅಲ್ಲದೇ ಸ್ನಾತಕೋತ್ತರ ವಿದ್ಯಾರ್ಥಿಗಳು ಕಲ್ಬುರ್ಗಿಯ ಹಲವು ಜ್ವಲಂತ ಸನಸ್ಯೆಗಳ ಬಗ್ಗೆ ಮಿನಿ ಪ್ರಬಂಧಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಂಡಿಸುವುದನ್ನು ಸ್ಮರಿಸಿ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಸಿದರು.

ಎರಡು ದಿನದ ಈ ಕಾರ್ಯಗರದಲ್ಲಿ ಭಾಷಣಕಾರ ಹೈದರಾಬಾದನ ಕೇಂದ್ರೀಯ ವಿಶ್ವವಿದ್ಯಾಲಯ, ಗಣಿತ ವಿಭಾಗದ ಪ್ರೊ. ಎಸ್ ಎನ್ ಹಸ್ಸನ್ ಇವರು “ಯೂನಿವರ್ಸ್ ‘ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಅದೇ ವಿವಿಯ ಭೌತ ವಿಜ್ಞಾನ ವಿಭಾಗದ ಪ್ರೊ ಪ್ರಿಯಾ ಹಸ್ಸನ್ ಇವರು ವಿಶ್ವ ವೀಕ್ಷಣೆ ಮತ್ತು ಬಾಹಿರಗ್ರಹಗಳ ಬಗ್ಗೆ ಉಪನ್ಯಾಸ ನೀಡಿದರು.

ಅಲ್ಲದೇ ಗಣಕಯಂತ್ರ ಪ್ರಯೋಗಲಯದಲ್ಲಿ ವುದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು.

ವಿದ್ಯಾರ್ಥಿನಿ ಫೌಜಿಯಾ ಘಝಲಾ ಪ್ರಾರ್ಥಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಡಾ. ಸಯ್ಯದ್ ಅಬ್ರಾರ ಸ್ವಾಗತಿಸಿದರೆ, ಗಣಿತ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ. ಸನಾ ಏಜಾಜ್ ಅತಿಥಿಗಳನ್ನು ಪರಿಚಯಿಸಿದರು.

ಕಾರ್ಯಾಗಾರದ ಸಂಯೋಜಕ, ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಮುಜೀಬ ಎರಡು ದಿನಗಳ ಕಾರ್ಯಾಗಾರದ ಸಮಗ್ರ ವರದಿ ಪ್ರಸ್ತುತ ಪಡಿಸಿದರು. ಭೌತವಿಜ್ಞಾನ ವಿಭಾಗದ ಸಹಾಯಕ ಪ್ರಧ್ಯಾಪಕಿ ಶಾಝಿಯಾ ಪರ್ವೀನ್ ವಂದಿಸಿದರೆ, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಪಾಕ ಸುಜಾವುದ್ದಿನ್ ಸಫಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here