ಕಲಬುರಗಿ; ಹಿಂದುಳಿದ ಜಾತಿಗಳ ಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ಪ್ರವರ್ಗ 2 ಬಿ ಅಡಿ ನೀಡಲಾಗುತ್ತಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಲವಾಡಿ ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಇದು ಬಿಜೆಪಿಯ ಕೋಮು ದ್ವೇಷದ ರಾಜಕಾರಣದ ಕರಾಳ ಮುಖವೆಂದು ಟೀಕಿಸಿದ್ದಾರೆ
ಮುಸ್ಲೀಂ ಸಮುದಾ.ದ ಸೇ. 4 ಮೀಸಲಾತಿ ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ಅವರ ದುರುz್ದÉೀಶವಾಗಿದೆ. ಇದು ಜಾತಿ- ಮತ ಧೃವೀಕರಣ ರಾಜಕೀಯದ ಹುನ್ನಾರದ ಬಾಗವಾಗಿದೆ. ಇದರಿಂದ ಯುವಕರಲ್ಲಿ ಜಾತಿ ಕೋಮಿನವ ವಿಷಬೀಜ ಬಿತ್ತುವ ಹುನ್ನಾರವೂ ಅಡಗಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಮುಸ್ಲಿಂಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು, ಇವರನ್ನು ಆರ್ಥಿಕವಾಗಿ ಹಿಂದುಲಿದವರ ಗುಂಪಿಗೆ ಇರುವ ಇಡಬ್ಲೂಎಸ್‍ಗೆ ಸೇರಿಸಲಾಗುವುದು ಎಂದು ಸಿಎಂ ಬೊಮ್ಮಾಯ ಹೇಳಿದ್ದಾರೆ. ಇದು ಕಮ್ಣೊರೆಸುವ ತಂತ್ರವಷ್ಟೆ, ಏಕೆಂದರೆ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಂಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಈ ರೀತಿಆಗಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯವಿಲ್ಲ.
ಸರ್ಕಾರ ಘೋಷಿಸಿರುವ ಪರಿಷ್ಕøತ ಮೀಸಲಾತಿ ನೀತಿ ಕನ್ನಡಿಯೊಳಗಿನ ಗಂಟು, ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ ರಜ್ಯದ ಜನತೆ ಬಲಿಯಾಗಬಾರದು. ಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಡಾ. ಅಜಯ್ ಸಿಂಗ್ ಕರೆ ನೀಡಿದ್ದಾರೆ.