ಶಹಾಬಾದ: ಸುಳ್ಳು ಭರವಸೆ ನೀಡುವ ಗ್ಯಾರಂಟಿ ಕಾರ್ಡಗೆ ಮರುಳಾಗದೇ, ಅಭಿವೃದ್ಧಿ ಮಾಡಿದ ಕಾರ್ಯಗಳನ್ನು ನೋಡಿ ಆಶೀರ್ವದಿಸಿ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶನಿವಾರ ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ ಹಾಗೂ ಪೈಪ್‍ಲೈನ್ ಮತ್ತು ನಳದ ಸಂಪರ್ಕ ಯೋಜನೆಯ ಅಡಿಗಲ್ಲು ನೇರವೇರಿಸಿ ಮಾತನಾಡಿದರು.
ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆನೆ.ತೊನಸನಹಳ್ಳಿ(ಎಸ್) ಗ್ರಾಮದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸುಮಾರು 3 ಕೋಟಿ ಅನುದಾನ ಒದಗಿಸಿ, ಗ್ರಾಮದ ಹಲವು ದಶಕಗಳ ಕೂಗಾದ ಕುಡಿಯುವ ನೀರಿನ ಪೂರೈಕೆ ಮಾಡಿದ್ದೆನೆ. ಶಾಸಕನಾಗುವ ಮುಂಚೆ ಗ್ರಾಮಕ್ಕೆ ಬಂದಾಗ ಇಲ್ಲಿನ ಜನರ ಒಂದೇ ಒಂದು ಕೂಗು ಕೇಳಿ ಬರುತ್ತಿತ್ತು. ಅದು ಕುಡಿಯುವ ನೀರು. ನಮ್ಮೂರಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ ಎಂದು ಇಲ್ಲಿನ ಜನರು ಅಳಲು ತೋಡಿಕೊಂಡಿದ್ದರು.ನಮಗೆ ಕುಡಿಯುವ ನೀರು ಒದಗಿಸಿದರೇ ಸಾಕು. ಮತ್ತೇನು ಬೇಕಿಲ್ಲ ಎಂದಿದ್ದರು.
ನಿವೇಲ್ಲರೂ ಆಶೀರ್ವದಿಸಿದರೇ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೆನೆ ಎಂದು ಭರವಸೆ ನೀಡಿದ್ದೆ. ನಿಮೆಲ್ಲರ ಆಶೀರ್ವಾದದಿಂದ ಶಾಸಕನಾದ ನಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ತೋರಿಸಿದ್ದೆನೆ. ಅಲ್ಲದೇ ತೊನಸನಹಳ್ಳಿ(ಎಸ್) ಗ್ರಾಮದಿಂದ ಹೊನಗುಂಟಾ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ, ಹಾಜಿಪೀರ ದರ್ಗಾದಿಂದ ಕಡೆಹಳ್ಳಿಗೆ ರಸ್ತೆ ನಿರ್ಮಾಣ, ಗ್ರಾಮಗಳಲ್ಲಿ ಸಿಸಿ ರಸ್ತೆ, ಕುಡಿಯುವ ನೀರಿನ ಪೈಪ್‍ಲೈನ್ ಹಾಗೂ ನಳದ ವ್ಯವಸ್ಥೆಗೆ ಸುಮಾರು 1ಕೋಟಿ ರೂ, ಸೇರಿದಂತೆ ಒಟ್ಟು 17 ಕೋಟಿ ಅನುದಾನದ ಅಭಿವೃದ್ಧಿ ಕೆಲಸ ಮಾಡಿದ್ದೆನೆ.ಗ್ರಾಮದಲ್ಲಿ ಎರಡು ಕುಡಿಯುವ ನೀರಿನ ಶುದ್ಧಿಕರಣ ಘಟಕ ನಿರ್ಮಾಣ ಮಾಡುತ್ತೆನೆ ಎಂದರಲ್ಲದೇ, ಈ ಹಿಂದಿನ ಶಾಸಕರು ಬಂದು ಏನು ಮಾಡಿದರು ಮತ್ತು ನಾನು ಏನು ಮಾಡಿದ್ದೆನೆ ಎಂದು ತಿಳಿದುಕೊಂಡು ಮತ ನೀಡಿ.ಇನ್ನೂ ಹಲವಾರು ಕೆಲಸಗಳು ಗ್ರಾಮಗಳಲ್ಲಿ ಮಾಡಬೇಕಿದೆ.ಅದಕ್ಕೆ ತಮ್ಮೆಲ್ಲರ ಆಶೀರ್ವಾದ ಬೇಕು ಎಂದರು.
ಗ್ರಾಮದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಪ್ರಭು ಮುತ್ಯಾ, ಕೊತ್ತಲಪ್ಪ ಮುತ್ಯಾ, ಕನಕಪ್ಪ ದಂಡಗುಲಕರ,ನಿಂಗಣ್ಣ ಹುಳಗೋಳಕರ್,ಬಸವರಾಜ ಮದ್ರಿಕಿ, ಗ್ರಾಪಂ. ಅಧ್ಯಕ್ಷೆ ಕಾವೇರಿ ಮಹಾಲಿಂಗ ಪೂಜಾರಿ, ನಿಂಗಣ್ಣಗೌಡ ಮಾಲಿಪಾಟೀಲ, ಮಲ್ಲಣ್ಣ ಮರತೂರ, ಶಿವಲಿಂಗಪ್ಪ ಗೊಳೆದ, ನಾಗೇಂದ್ರಪ್ಪ ಹುಗ್ಗಿ, ಮಹಾದೇವ ಬಂದಳ್ಳಿ,ಸಿದ್ದು ಗೊಳೇದ್, ಬಸÀವರಾಜ ಗೊಳೇದ್, ಸಿದ್ದು ಸಜ್ಜನ್, ಅವಿನಾಶ ಹಣಮಂತ, ಮೀರಅಲಿ ನಾಗೂರೆ, ಬೆಳಪ್ಪ ಖಣದಾಳ, ದೊಡ್ಡಪ್ಪ ಹೊಸಮನಿ, ಸದಾನಂದ ಕುಂಬಾರ, ಮಹಾದೇವ ಗೊಬ್ಬೂರಕರ್, ದಿನೇಶ ಗೌಳಿ, ಪಿಡಿಒ ನಿಂಗಪ್ಪ ಕೆಂಭಾವಿ, ಪ್ರಭು ಸೀಬಾ,ಸಿದ್ದಣಗೌಡ ಭಮ್ಮಶೆಟ್ಟಿ, ಮಲ್ಲಿಕಾರ್ಜುನ ಗೊಳೇದ್ ಉಪಸ್ಥಿತಿರಿದ್ದರು.
ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಕ್ಕೆ ಗ್ರಾಪಂ ಸರ್ವ ಸದಸ್ಯರು ಶಾಸಕರಿಗೆ ಬೆಳ್ಳಿ ಕಿರೀಟ ತೊಡಸಿದರು.
ಯಾರು ಜನರ ಸಮಸ್ಯೆಯನ್ನು ಅರಿತು ಪರಿಹರಿಸುತ್ತಾರೆ ಅವರೇ ನಿಜವಾದ ಜನಪ್ರತಿನಿಧಿಗಳು. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳು ಗತಿಸಿದರೂ ತೊನಸನಹಳ್ಳಿ(ಎಸ್) ಗ್ರಾಮಕ್ಕೆ ಕುಡಿಯುವ ನೀರಿನ ಹಾಹಾಕಾರ ಇತ್ತು. ಕುಡಿಯುವ ನೀರು ಕೊಟ್ಟರೇ ಸಾಕು.ಮತ್ತೆನೂ ಬೇಕಿಲ್ಲ ಎಂದು ಜನರ ಕೂಗಾಗಿತ್ತು. ಅದನ್ನು ಶಾಸಕ ಬಸವರಾಜ ಮತ್ತಿಮಡು ಅವರು ಶಾಸಕರಾದ ಮೇಲೆ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.ಹೆಣ್ಣು ಕೊಡದ ಊರಿಗೆ ನೀರಿ ಕೊಡುವ ಮೂಲಕ ತೊನಸನಹಳ್ಳಿ(ಎಸ್) ಗ್ರಾಮದ ಭಗೀರಥ ಎನಿಸಿಕೊಂಡಿದ್ದಾರೆ. ಕೇವಲ ನೀರು ಕೊಟ್ಟರೇ ಸಾಕು ಎಂದು ಹೇಳಿದ ಗ್ರಾಮಸ್ಥರಿಗೆ ನೀರು, ರಸ್ತೆ, ನಳದ ಮತ್ತು ಪೈಪ್‍ಲೈನ್ ವ್ಯವಸ್ಥೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ.ಆದ್ದರಿಂದ ಬರುವ ಚುನಾವಣೆಯಲ್ಲಿ ಅವರನ್ನು ಆಶೀರ್ವದಿಸಿ ಎಂದರು. – ಅಣವೀರ ಇಂಗಿನಶೆಟ್ಟಿ ಅಧ್ಯಕ್ಷರು ಬಿಜೆಪಿ.