ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಕಾಲ ಬದ್ಧನಾಗಿರುತ್ತೆನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶನಿವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಲಾದ 2022-23ನೇ ಸಾಲಿನ ಕ.ಕ.ಪ್ರ.ಅ.ಮ.ಮೈಕ್ರೋಕ್ರೀಯಾ ಯೋಜನೆಯಡಿ ನಗರದ ವಾರ್ಡ ನಂ.8ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ ನೆಲಸಮಗೊಳಿಸಿ ಹೊಸ 8 ಕೋಣೆಗಳ ನಿರ್ಮಾಣಮತ್ತು ಶಾಸಕರ ಸರಕಾರಿ ಕನ್ಯಾ ಮಾದರಿ ಶಾಲೆಯ ಹಳೆ ಕಟ್ಟಡ ನೆಲಸಮಗೊಳಿಸಿ 3 ಕೋಣೆಗಳ ನಿರ್ಮಾಣಕ್ಕೆ ಅಡಿಗಲ್ಲು ನೇರವೇರಿಸಿ ಮಾತನಾಡಿದರು.
ಈಗಾಗಲೇ ಎರಡು ಶಾಲೆಯ ಆವರಣದಲ್ಲಿ ಹಳೆಯ ಕಟ್ಟಡಗಳು ಬೀಳುವ ಹಂತದಲ್ಲಿದ್ದವು.ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದರು.
ಇದನ್ನು ಅರಿತು ವಾರ್ಡ ನಂ.8ರ ಸರಕಾರಿ ಶಾಲೆಗೆ 8 ಕೋಣೆಗಳ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂ. ಅನುದಾನ ಹಾಗೂ ಶಾಸಕರ ಸರಕಾರಿ ಕನ್ಯಾ ಮಾದರಿ ಶಾಲೆಯಲ್ಲಿ 3 ಕೋಣೆಗಳ ನಿರ್ಮಾಣಕ್ಕೆ ಸುಮಾರು 35ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಜೂನ್ ತಿಂಗಳಲ್ಲಿ ಶಾಲಾ ಪ್ರಾಂಭವಾಗುವುದರಿಂದ ಈ ಕೆಲಸವನ್ನು ಜೂನ್ ಒಳಗಾಗಿ ಆದಷ್ಟು ಬೇಗನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಶಿಕ್ಷಕರು ಕೋಣೆಗಳ ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಶ್ರಮಿಸಬೇಕೆಂದು ಹೇಳಿದರು.
ಅಲ್ಲದೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮ ಸರಕಾರ ಸಾಕಷ್ಟು ಅನುದಾನ ನೀಡಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಅನುದಾನ ವ್ಯಯಿಸಲಾಗಿದೆ.ಸರಕಾರಿ ಶಾಲೆಗೆ ಬಡವರ ಮಕ್ಕಳು ಬರುವುದರಿಂದ ಆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಎತ್ತರಕ್ಕೆ ಬೆಳೆಯುವಂತೆ ಮಾಡಬೇಕು. ಈ ಶಾಲೆಯಿಂದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವಂತ ವಾತಾವರಣ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಮುಖಂಡರಾದ ಕನಕಪ್ಪ ದಂಡಗುಲಕರ್ ಮಾತನಾಡಿದರು. ಶಂಕ್ರಯ್ಯಸ್ವಾಮಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಗರಸಭೆಯ ಸದಸ್ಯೆ ತಿಮ್ಮಾಬಾಯಿ ಕುಸಾಳೆ,ಲಕ್ಷ್ಮಿಬಾಯಿ ಕುಸಾಳೆ,ಪಾರ್ವತಿ ಪವಾರ, ಭೀಮರಾವ ಸಾಳುಂಕೆ,ದೇವದಾಸ ಜಾಧವ,ಮುಖ್ಯಗುರುಮಾತೆ ಬಾಯಮ್ಮ ಸಗರ್,ನಗರಸಭೆಯ ಸದಸ್ಯರಾದ ರವಿ ರಾಠೋಡ,ಸಿದ್ರಾಮ ಕುಸಾಳೆ,ನಾಗರಾಜ ಮೇಲಗಿರಿ, ಅನೀಲ ಬೋರಗಾಂವಕರ್,ನಿಂಗಣ್ಣ ಹುಳಗೋಳಕರ್,ಕೃಷ್ಣ ಕುಸಾಳಕರ್, ಸಿದ್ರಾಮ ಗುಂಜಾಳಕರ್,ರಾಜು ಮೇಸ್ತ್ರಿ, ಬಸವರಾಜ ಬಿರಾದಾರ,ಸದಾನಂದ ಕುಂಬಾರ,ಹಣಮಂತ ಪವಾರ,ಮಹಾದೇವ ಗೊಬ್ಬೂರಕರ್, ದಿನೇಶ ಗೌಳಿ ಸೇರಿದಂತೆ ಅನೇಕರು ಇದ್ದರು.