ರಾಜಕಿಯ ಪಕ್ಷಗಳ ಪ್ರಣಾಳಿಕೆಯಲ್ಲಿ ಕಲ್ಯಾಣದ ಬಗ್ಗೆ ಘೋಷಣೆಗೆ ಸಮಿತಿ ಒತ್ತಾಯ

0
116

ಕಲಬುರಗಿ: ಬರುವ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಸರ್ವಾಂಗೀಣ ಪ್ರಗತಿಯ ಬಗ್ಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ತಮ್ಮ ತಮ್ಮ ಪಕ್ಷಗಳ ಪ್ರಣಾಳಿಕೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಇಂದಿನ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡು ಒತ್ತಾಯಿಸಿದೆ.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರಾಷ್ಟ್ರ ಮತ್ತು ಪ್ರಾದೇಶಿಕ ಪಕ್ಷಗಳು ನಮ್ಮ ಪ್ರದೇಶದಿಂದ ಆಯ್ಕೆಯಾಗುತ್ತಿದ್ದಾರೆ. ಆದರೆ, ಕಲ್ಯಾಣದ ಪ್ರಗತಿಯ ಬಗ್ಗೆ ಪರಿಣಾಮಕಾರಿ ಸ್ಪಂದನೆ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ನಮ್ಮ ಭಾಗದ ಅಭಿವೃದ್ಧಿಯ ಬಗ್ಗೆ ಪ್ರಣಾಳಿಕೆಯ ಘೋಷಣಾ ಪತ್ರದಲ್ಲಿ ಸ್ಪಷ್ಟವಾಗಿ ಘೋಷಣೆಗಳು ಮಾಡಿ ಮತ ಯಾಚಿಸಬೇಕೆಂದು ಒತ್ತಾಯಿಸಲಾಯಿತು.

Contact Your\'s Advertisement; 9902492681

ಸಭೆಯಲ್ಲಿ ಭಾಗವಹಿಸಿದ ಮುಖಂಡರಾದ ಮನೀಷ್ ಜಾಜು, ಲಿಂಗರಾಜ ಸಿರಗಾಪೂರ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಅಬ್ದುಲ ರಹೀಂ, ಸಂತೋಷ ಜವಳಿ, ಪೆÇ್ರ. ದೇವಿದಾಸ ಜಿ.ಎಂ., ಪೆÇ್ರ.ಅನೀಲ ಕುಲಕರ್ಣಿ, ಡಾ. ಮಹಾವೀರ, ವಿನೋದ ಪಾಟೀಲ, ಬಸವರಾಜ ಕೆ., ಮಹಾದೇವ ಜಿ. ಪರಮೇಶ್ವರ, ಅಮಿತಕುಮಾರ ಭೀಮರಾವ ಕಂದಳ್ಳಿ, ಬಸವರಾಜ ಮ್ಯಾಗಿ, ಮಹೆತಾಬ ಖಾನ್, ಮಹಿಬೂಬ ಸಾಬೀರ ಅಲಿ ಮುಂತಾದವರು ಮಾತನಾಡಿ ಸಮಿತಿಯ ಅಧ್ಯಕ್ಷರು ನಾವು ಕೊಟ್ಟ ಸಲಹೆಗಳನ್ನು ಪರಿಗಣಿಸಿ ವಿವರವಾದ ಪ್ರಸ್ತಾವನೆಯನ್ನು ಸಿದ್ಧಮಾಡಿ ಎಲ್ಲಾ ಪಕ್ಷಗಳ ರಾಜ್ಯಾಧ್ಯಕ್ಷರುಗಳಿಗೆ ಕಲ್ಯಾಣ ಕರ್ನಾಟಕದ ಕಲ್ಯಾಣದ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಲು ಅಭಿಯಾನ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿದರು.

ಸಮಿತಿಯ ಪ್ರಮುಖರ ಮತ್ತು ಚಿಂತಕರ ಸಲಹೆಗಳಂತೆ ಆದಷ್ಟು ಶೀಘ್ರ ಒಂದೆರಡು ದಿನಗಳಲ್ಲಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ 371ನೇ(ಜೆ) ಕಲಂ ವಿಷಯಗಳು ಸೇರಿದಂತೆ ವಿವರವಾದ ಪ್ರಸ್ತಾವನೆ ಸಿದ್ಧಪಡಿಸಿ ಅಧಿಕೃತವಾಗಿ ಘೋಷಣೆ ಮಾಡಿ ಆಯಾ ಪಕ್ಷಗಳಿಗೆ ಸಲ್ಲಿಸುವ ಅಭಿಯಾನದ ದಿನಾಂಕ ಘೋಷಣೆ ಮಾಡಲಾಗುವದೆಂದು ಸಭೆಯ ಅಧ್ಯಕ್ಷತೆ ವಹಿಸಿದ ಲಕ್ಷ್ಮಣ ದಸ್ತಿಯವರು ತಿಳಿಸಿದರು.

ಸಭೆಯಲ್ಲಿ ಚಿಂತಕರು ಸೇರಿದಂತೆ ಸಮಿತಿಯ ಕೋರ ಕಮಿಟಿಯ ಸದಸ್ಯರು ಮತ್ತು ಕ್ರೀಯಾ ಸದಸ್ಯರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here