ಹೊಸ ಬಡಾವಣೆಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಸೌಲಭ್ಯ: ಅಪ್ಪುಗೌಡ

0
61

ಕಲಬುರಗಿ: ರಾಜ್ಯದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಹಾನಗರದ ಹೊಸ ಬಡಾವಣೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.

ವಾರ್ಡ ನಂಬರ 55 ರ ವ್ಯಾಪ್ತಿಯ ಕುಬೇರ ನಗರ ಹಾಗೂ ನ್ಯೂ ಓಝಾ ಬಡಾವಣೆಯಲ್ಲಿ ಸಿಸಿ ರಸ್ತೆ ಹಾಗೂ ವರ್ತುಲ್ ರಸ್ತೆಯ ಸರ್ವಿಸ್ ರಸ್ತೆಯ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ಮಹಾನಗರ ಅಂತರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕೆಂದು ಆಶಯ ವ್ಯಕ್ತ ಪಡಿಸಿದ್ದು, ಅದರಗನುಣವಾಗಿ ಕೆಕೆಆರ್ ಡಿಬಿ ಅನುದಾನ 5000 ಕೋ.ರೂ ಗೆ ಹೆಚ್ಚಿಸಿದ್ದಾರೆ. ಹೀಗಾಗಿ ಮಹಾನಗರದಲ್ಲಿ ಹಿಂದೆಂದೂ ಆಗದ ಕಾಮಗಾರಿಗಳಾಗುತ್ತಿವೆ. ಮಹಾನಗರ ಎಲ್ಲ 55 ವಾರ್ಡ ಗಳ ಸಹ ಸತತ ನೀರು ಪೂರೈಕೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 50 ಕೋ.ರೂ ವೆಚ್ಚದಲ್ಲಿ ಮಹಾನಗರದ ಪ್ರಥಮ ಫ್ಲೈ ಓವರ್ ಸಹ 50 ಕೋ.ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದರಿಂದ ಸಂಚಾರಿ ದಟ್ಟಣೆ ಕಡಿಮೆಗೊಳಿಸಲು ಪೂರಕ ವಾಗುತ್ತದೆ ಎಂದು ಅಪ್ಪುಗೌಡ ಹೇಳಿದರು.

ತ್ರಿಬಲ್ ಇಂಜಿನ್ ಸರ್ಕಾರ: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಜತೆಗೆ ಈಗ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಅಸ್ತಿತ್ವಕ್ಕೆ ಬಂದಿದ್ದರಿಂದ ತ್ರಿಬಲ್ ಇಂಜಿನ್ ಸರ್ಕಾರ ಎನ್ನುವಂತಾಗಿದೆ. ಮಹಾನಗರದ ಬೀದಿದೀಪ ಸುಧಾರಣೆ ಯನ್ನು 60 ಕೋ.ರೂ ವೆಚ್ಚದಲ್ಲಿ ಎಲ್‍ಇಡಿ ಬಲ್ಬಗಳ ಅಳವಡಿಕೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೀದಿ ದೀಪಗಳು ಇನ್ಮೂಂದೆ ಸೆನ್ಸಾರ್ ಮೇಲೆ ಕಾರ್ಯನಿರ್ವಹಿಸಲಿವೆ.

ಶೀಘ್ರದಲ್ಲೇ ಸಭೆ ನಡೆಸಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕುಬೇರ ನಗರ- ನ್ಯೂ ಓಝಾ ಲೇ ಔಟ್ ರಸ್ತೆ ಸಂಚಾರಿಸಲು ಕಷ್ಟ ವಾಗುತ್ತಿದೆ ಎಂಬುದನ್ನು ಬಡಾವಣೆಯ ಮುಖಂಡರಾದ ಹಣಮಂತರಾವ ಹಿರೇಗೌಡ ಅವರು ಗಮನಕ್ಕೆ ತಂದಿದ್ದರಿಂದ ಈಗ ರಸ್ತೆ ಸುಧಾರಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ರಾಮಮಂದಿರದಿಂದ ಹೀರಾಪುರ ಕ್ರಾಸ್ ತದನಂತರ ಹುಮನಾಬಾದ್ ಕ್ರಾಸ್ ರಸ್ತೆವರೆಗಿನ ವರ್ತುಲ ರಸ್ತೆ ಮಾದರಿ ನಿಟ್ಟಿನಲ್ಲಿ 90 ಕೋ.ರೂ ವೆಚ್ಚದಲ್ಲಿ ಕೈಗೆತ್ತುಕೊಳ್ಳಲಾಗಿದೆ.200 ಕೋ.ರೂ ವೆಚ್ಚದಲ್ಲಿ ಜಯದೇವ ಆಸ್ಪತ್ರೆ ಸುಸಜ್ಜಿತ ಕಟ್ಟಡ ನಡೆಯುತ್ತದೆ. 30 ಕೋ.ರೂ ವೆಚ್ಚದ ತರಕಾರಿ ಮಾರುಕಟ್ಟೆ ನಿರ್ಮಾಣ, ಕುಡಾ ಬಡಾವಣೆಯಲ್ಲಿ ಅರ್ಧಕ್ಕೆ ನಿಂತಿರುವ ರಾಜೀವ್ ಗಾಂಧಿ ಥೀಮ್ ಪಾರ್ಕ ಕಾಮಗಾರಿ ಮತ್ತೆ ಪ್ರಾರಂಭಿಸಲಾಗುತ್ತಿದೆ. ಹೀಗೆ ಮಹಾನಗರದ ಸವಾರ್ಂಗೀಣ ಅಭಿವೃದ್ಧಿ ಗೆ ಹತ್ತಾರು ಕಾರ್ಯಗಳನ್ನು ಕೈಗೊಂಡು ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಇದಕ್ಕೆಲ್ಲ ಕ್ಷೇತ್ರದ ಜನರು ನೀಡಿರುವ ಆಶೀರ್ವಾದ ಕಾರಣ ಎಂದು ಅಪ್ಪುಗೌಡ ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, ತಮ್ಮ ಅನುದಾನದಲ್ಲಿ 2 ಕೋ.ರೂ ವೆಚ್ಚದಲ್ಲಿ ಸರ್ವಿಸ್ ರಸ್ತೆ ಸುಧಾರಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಲಬುರಗಿ ಮಹಾನಗರ ಸಮಗ್ರ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದರು.

ಪಾಲಿಕೆ ಸದಸ್ಯ ಅರ್ಚನಾ ಬಸವರಾಜ ಪಾಟೀಲ, ಕುಡಾ ಅಧ್ಯಕ್ಷ ಅವಿನಾಶ ಕುಲಕರ್ಣಿ, ಬಡಾವಣೆಯ ಪ್ರಮುಖರಾದ ಡಾ. ಶರಣು ಹತ್ತಿ ಮುಂತಾದವರು ವೇದಿಕೆ ಮೇಲಿದ್ದರು. ಕುಪೇಂದ್ರ ಕೆ, ನಾಗೇಂದ್ರ, ಕಲಶೆಟ್ಟಿ, ಮಲ್ಲಿನಾಥ ನಂದಿ, ಸಂಗಮೇಶ, ರಾಘವೇಂದ್ರ, ಬಸವರಾಜ, ಶಿವಕುಮಾರ, ರಾಘವೇಂದ್ರ ಕುಲಕರ್ಣಿ, ವಿಜಯಕುಮಾರ ಹಂಗರಗಿ, ಶಿವಕುಮಾರ ತಳಳ್ಳಿ, ಬಸವರಾಜ ದಂಡೋತಿ, ಬಸವರಾಜ ದಂಡೋತಿ, ಕೃಷ್ಣ ಕುಲಕರ್ಣಿ, ಕವಿರಾಜ ಬಿರಾದಾರ ಸೇರಿದಂತೆ ಮುಂತಾದವರಿದ್ದರು. ಕುಶಾಲ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here