ಕಲಬುರಗಿ/ ಜೇವರ್ಗಿ; ಜೇವರ್ಗಿ ಕ್ಷೇತ್ರದ ಸರ್ವಾಂಗೀಣ ಅಭಿವೈದ್ಧಿಗೆ ಪಕ್ಷಾತೀತವಾಗಿ ಪ್ರಾಮಾಣಿಕ ಪ್ರಯತ್ನ ಮಾಡುಬೇಕಾಗುತ್ತದೆ. ಆಗ ಮಾತ್ರ ಕ್ಷೇತ ಸರ್ವತೋಮುಖ ಅಭಿವೈದ್ದಿ ಹೊಂದಲು ಸಾಧ್ಯ ಆ ನಿಟ್ಟಿನಲ್ಲಿ ಜೇವರ್ಗಿ ಪಟ್ಟಣದಲ್ಲಿಯ ಅಭಿವೈದ್ದಿ ಕಾಮಗಾರಿಗಳಿಗೆ 5.83 ಕೋಟಿ ರೂ ಅನುದಾನ ಬಿಡುಗಡೆಗೊಳಿಸಲಾಗಿದೆ ಶಾಸಕ ಡಾ. ಅಜಯಸಿಂಗ್ ಹೇಳಿದರುಅವರು
ಜೇವರ್ಗಿ ಪಟ್ಟಣದ ಕನಕದಾಸ ವೈತ್ತದಲ್ಲಿ ಪುರಸಭೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಪೂರ್ಣಗೊಂಡ ವಿವಿಧ ಅಭಿವೈದ್ಧಿ ಕಾವiಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
2021-22ನೇ ಸಾಲಿನಲ್ಲಿ ನಗರೋತ್ಥಾನ ಹಂತ 4 2022-23ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಜೇವರ್ಗಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ರಸ್ತೆ, ಮಳೆನೀರು ಚರಂಡಿ, ಉದ್ಯಾನವನ ಅಭಿವೈದ್ಧಿ, ಪಟ್ಟಣದ ಮಟನ್ ಮಾರ್ಕೆಟ್ ಅಭಿವೈದ್ಧಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳಿಗೆ 5.83ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ.ಲೊಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿ ಟೌನ್ ಹಾಲ್ ಪೀಠೋಪಕರಣ ಹಾಗೂ ಕಂಪೌಂಡ ಗೋಡೆ ನಿರ್ಮಾಣ ಕಾಮಗಾರಿ.
ಸರ್ಕಾರಿ ಕನ್ಯಾ ಪ್ರೌಢ ಶಾಲೆಗೆ 4 ಕೋಣೆಗಳ ನಿಮಾಣಕ್ಕೆ ರೂ.40ಲP್ಷÀ, ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ 3ಕೋಣೆಗಳ ನಿರ್ಮಾಣಕ್ಕೆ ರೂ.32 ಲP್ಷÀ ಹಾಗೂ ಎಸ್.ಡಿ.ಪಿ ಯೋಜನೆ ಅಡಿಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ 2.98ಕೋಟಿ, ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ 1.49 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಕಾಂಗ್ರೆಸ್ ಮುಖಂಡರು ಹಾಗೂ ಸದ್ಯ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂವಿಧಾನದ ಕಲಂ 371 (ಜೆ) ತಿದ್ದುಪಡಿ ತರಲಾಯಿತು. ಇದರಿಂದ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಶಿP್ಷÀಣ ಹಾಗೂ ಉದ್ಯೋಗಾವಕಾಶಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಗಂಗೂಬಾಯಿ ಮಂದ್ರವಾಡ, ಉಪಾಧ್ಯಷ ಸಂಗಣ್ಣಗೌಡ ಪಾಟೀಲ ರದವಾಡಗಿ, ಪುರಸಭೆ ಮುಖ್ಯಾಕಾರಿ ಸಂಗೀತಾ ಹಿರೇಮಠ, ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಹೆಬ್ಬಳ್ಳಿ, ಜಿಲ್ಲಾ ನಗರಾಭಿವೈದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಹೆಬ್ಬಾಳ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಜಮುಲ್ ಹುಸೇನ್, ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಹೆಚ್, ಸಹಾಯಕ ಅಭಿಯಂತರ ಧನರಾಜ್ ಚವ್ಹಾಣ, ಕಿರಿಯ ಅಭಿಯಂತರ ಭೀಮಸೇನ್ ಜೋಶಿ ಸೇರಿದಂತೆ ಜೇವರ್ಗಿ ಪುರಸಭೆಯ ಸದಸ್ಯರು ಹಾಗೂ ಪಟ್ಟಣದ ನಾಗರಿಕರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.