ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕಾಗಿ ಆಗ್ರಹ

0
85
  • ಜಗದೇಶ ಪೂಜಾರಿ ರಾವೂರ

ಚಿತ್ತಾಪುರ: ತಾಲೂಕಿನ ರಾವೂರ ಗ್ರಾಮವು ತಾಲೂಕಿನ ಕೇಲವೇ ಅತೀ ದೊಡ್ಡ ಗ್ರಾಮಗಳಲ್ಲಿ ಒಂದಾಗಿದ್ದು ಈಗಾಗಲೇ ಗ್ರಾಮ ಪಂಚಾಯತನಿಂದ ಪಟ್ಟಣ ಪಂಚಾಯತಿಗೆ ಉನ್ನತೀಕರಿಸಲು ಚಿಂತನೆಗಳು ನಡೆದಿದೆ ಗ್ರಾಮವು ಸುಮಾರು 15 ಸಾವಿರಕ್ಕು ಮೇಲ್ಪಟ್ಟು ಜನಸಂಖ್ಯೆ ಹೊಂದಿದ್ದು ರಾಷ್ಟ್ರೀಯ ಹೆದ್ಧಾರಿ 150 ಹಾದು ಹೋಗಿರುತ್ತದೆ ಯಾದಗಿರಿ-ಕಲಬುರಗಿ ಜೇವರ್ಗಿ -ಸೇಡಂಗಳಕೂಡ ರಸ್ತೆಗಳು ಸಹ ರಾವೂರ ಗ್ರಾಮದಲ್ಲಿಯೆ ಸಂಧಿಸುತ್ತವೆ

ಕಳೆದ ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸಿದ ನಂತರ ವಾಹನಗಳ ಓಡಾಟ ಆತೀ ಹೆಚ್ಚಾಗಿದ್ದು ಜನತೆಗೆ ಅನುಕೂಲ ಒದಗಿಸಿರುವುದು ನಿಜ ಜತೆ-ಜತೆಗೆ ಕಲ್ಲುಗಣಿಗಳ ವ್ಯವಹಾರ ಹಲವಾರು ಸಿಮೇಂಟ್ ಕಂಪನಿಗಳ ಜನ-ವಾಹನ ಸಂಚಾರವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಗ್ರಾಮವು ಕೂಡುರಸ್ತೆಯ ಹೊರತಾಗಿ ಪಂಚಾಯತ ಕೇಂದ್ರ ತಾಲ್ಲೂಕಾ ಪಂಚಾಯತ ಜಿಲ್ಲಾ ಪಂಚಾಯತ ಸದಸ್ಯರುಗಳ ಕೇಂದ್ರ ಸ್ಥಾನವನ್ನು ಹೊಂದಿದೆ.

Contact Your\'s Advertisement; 9902492681

ಆದರೆ ಗ್ರಾಮದ ಮುಖಾಂತರ ಸಂಚರಿಸುವ ಪ್ರಯಾಣಿಕರಿಗೆ ಪ್ರಯಾಣಿಕರ ತಂಗುದಾಣವಿಲ್ಲದೇ ತೀರ ತೊಂದರೆ ಅನುಭವಿಸುತ್ತಿದ್ದಾರೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವ ಪರಿಸ್ಥಿತಿಯಿದ್ದರೆ ಬೇಸಿಗೆಕಾಲದಲ್ಲಿ ಬಿಸಿಲ ಬೇಗೆ ಮೇಲಿಂದ ಪಕ್ಕದಲ್ಲಿಯೇ ಇರುವ ಮಧ್ಯದ ಅಂಗಡಿಯ ಗಿರಾಕಿಗಳು ಬೇರೆ ಹೀಗಾಗಿ ಪ್ರಯಾಣಿಕರ ತೊಂದರೆ ದೇವರಿಗೇ ಪ್ರೀತಿ ವಿಷಯವಸ್ತು ಮಾಜಿ ಸಚಿವರು-ಹಾಲಿ ಶಾಸಕರು ಲೋಕಸಭಾ ಸದಸ್ಯರ ಗಮನಕ್ಕೆ ಇದ್ದರೂ ಸಹ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ಜಗದೇಶ ಪೂಜಾರಿ ರಾವೂರ ಅವರು ತಿಳಿಸಿದಾರೆ.

ಹಲವಾರು ಬಾರಿ ಅಪಘಾತಗಳು ಜರುಗಿದರು ಸಹ ಸಂಬಂಧಿಸಿದ ಯಾವುದೇ ಅಧಿಕಾರಿ ಕ್ಯಾರೆ ಎನ್ನುವರಿಲ್ಲ ಈಗಲಾದರೂ ಸಮಯ ಪ್ರಜ್ನೆಯಿಂದ ಎಚ್ಛೇತು ದೊಡ್ಡ ಅನಾಹುತವಾಗುವ ಮೊದಲು ಸೂಕ್ತ ಕ್ರಮ ಕೈಗೊಂಡು ಬಸ್ ಶೆಲ್ಟರ್ ನಿರ್ಮಾಣ ಮಾಡಲು ಗ್ರಾಮಸ್ಥರೆಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದ್ದು ವಿಳಂಬದಲ್ಲಿ ಉಗ್ರ ಹೋರಾಟದ ಬೆದರಿಕೆ ಹಾಕಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here