ಕಾರ್ಮಿಕರ ಮಕ್ಕಳಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ ಆರೋಪ

0
8

ಸುರಪುರ: ಸರಕಾರ ನೊಂದಾಯಿತ ಕಟ್ಟಡ ಕಾಂರ್ಇಕರ ಮಕ್ಕಳಿಗೆ ಬಿಡುಗಡೆ ಮಾಡಿರುವ ಕಿಟ್‍ಗಳ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮುಖಂಡರು ಮಾತನಾಡಿ,ಸರಕಾರ ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಕಿಟ್‍ಗಳನ್ನು ನೀಡಲಾಗುತ್ತಿದ್ದು,ಇಲ್ಲಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೆಲವು ಮಕ್ಕಳಿಗೆ ಕಿಟ್ ವಿತರಿಸಿ ಇನ್ನುಳಿದ ಮಕ್ಕಳಿಗೆ ಇಲ್ಲವೆಂದು ವಂಚಿಸಿದ್ದಾರೆ.ಆದ್ದರಿಂದ ಕಿಟ್ ಎಲ್ಲಾ ಮಕ್ಕಳಿಗೆ ವಿತರಿಸದೆ ಕೇವಲ ಉಳ್ಳವರ ಮಕ್ಕಳಿಗೆ ವಿತರಣೆ ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ,ಮುಖಂಡರಾದ ಶರಣಪ್ಪ ಬೈರಿಮರಡಿ,ರಾಜು ದರಬಾರಿ,ಹೊನ್ನಪ್ಪ ಬೈರಿಮರಡಿ,ರಾಮು ಪೊಲೀಸ್ ಪಾಟೀಲ್,ಶಿವರಾಜ ವಗ್ಗಾರ,ರಾಘವೇಂದ್ರ ಕಟ್ಟಿಮನಿ,ರಾಘವೇಂದ್ರ ಗೋಗಿಕೇರ,ತಿಪ್ಪಣ್ಣ ಕಾನಿಕೇರ,ರವಿ ಬಿಚ್ಚಗತ್ತಿಕೇರ,ಲಕ್ಷ್ಮೀಬಾಯಿ ಕಬಾಡಗೇರ,ಮರೆಮ್ಮ,ಲಕ್ಷ್ಮೀ ಮುದ್ದಣ್ಣ,ಪಾರ್ವತಿ,ಸವಿತಾ,ಪದ್ಮಾವತಿ,ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here