ಸುರಪುರ: ಇಂದು ರಾಜ್ಯಾಧ್ಯಂತ ಸುರಿದ ಭಾರಿ ಮಳೆಗೆ ಹಾಗು ಮಹಾರಾಷ್ಟ್ರದಿಂದ ಬಿಡುಗಡೆ ಮಡಲಾದ ಅಪಾರ ಪ್ರಮಾಣದ ನೀರಿನಿಂದ ರಾಜ್ಯದ ಅನೇಕ ಜಿಲ್ಲೆಗಳ ಜನರ ಬದುಕು ಮೂರಾಬಟ್ಟೆಯಾಗಿದ್ದು,ಎಲ್ಲ ನೆರೆ ಸಂತ್ರಸ್ತರಿಗೆ ಸರಕಾರ ಕೂಡಲೆ ನೆರವಾಗಲಿ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಮಂಗಳವಾರ ಸಂಜೆ ತಾಲ್ಲೂಕಿನ ದೇವಾಪುರ,ಹಾವಿನಾಳ,ಶೆಳ್ಳಿಗಿ ಮತ್ತಿತರೆ ಗ್ರಾಮಗಳ ನೆರೆಯಿಂದ ನಷ್ಟಗೊಂಡ ಜಮೀನುಗಳ ವೀಕ್ಷಣೆ ಮಾಡಿ ಮಾತನಾಡಿ,ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಪೀಡಿತ ಕುಟುಂಬಗಳಿಗೆ ಸದ್ಯ ಹತ್ತು ಸಾವಿರ ಧನ ಸಹಾಯ ಮಾಡುವುದಾಗಿ ಹೇಳಿದ್ದಾರೆ.ಆದರೆ ನಯಾ ಪೈಸೆನಯನ್ನು ನೀಡದೆ ಬರೀ ಬಾಯಿ ಮಾತಲ್ಲಿ ಹೇಳುತ್ತಿದ್ದಾರೆ.ಆದರೆ ಹತ್ತು ಸಾವಿರ ರೂಪಾಯಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದು.ಸಂತ್ರಸ್ತರ ಆಹಾರ ಧಾನ್ಯಗಳು,ಸಾಮಾನುಗಳು,ಬಟ್ಟೆ ಬರೆ,ವಸ್ತು ವಡವೆಗಳೆಲ್ಲವೂ ನೀರಲ್ಲಿ ಕೊಚ್ಚಿ ಹೋಗಿರುವಾಗ ಬರೀ ಹತ್ತು ಸಾವಿರ ಬದಲು ಇನ್ನೂ ಹೆಚ್ಚಿಸಿ ಧನ ಸಹಾಯ ಕೂಡಲೆ ಮಾಡುವಂತೆ ಒತ್ತಾಯಿಸಿದರು.
ರಾಜ್ಯದ ಸುಮಾರು ಹದಿನೆಂಟು ಜಿಲ್ಲೆಗಳು ನೆರೆಗೆ ನಲುಗಿದ್ದು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ಹೆಚ್ಚಿನ ಪರಿಹಾರವನ್ನು ನೀಡಬೇಕು. ಈಗಾಗಲೆ ಜೆಡಿಎಸ್ ಪಕ್ಷದಿಂದ ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಸ್ಥಿತಿಯನ್ನು ನೋಡಿದ್ದೆವೆ ಹಾಗು ನಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡುತ್ತಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ,ರಾಜಾ ಹರಿಶ್ಚಂದ್ರ ನಾಯಕ,ರಾಜಾ ಪಿಡ್ಡ ನಾಯಕ,ಎಂ.ಜಿ.ಕೊಣ್ಣೂರ,ಶಾಂತು ತಳವಾರಗೇರಾ ಇದ್ದರು.