ಜನರನ್ನು ರಂಜಿಸಿದ ಕಲಾವಿದರ ಸಂಗೀತ ಜಾತ್ರೆ

0
11

ಶಹಾಪುರ: ಇಲ್ಲಿನ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ ಪಕ್ಕದಲ್ಲಿರುವ ಮಹಾಲಿಂಗೇಶ್ವರ ಸಂಗೀತ ಭವನದಲ್ಲಿ ಶ್ರೀ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಆಯೋಜಿಸಿದ ಸಂಗೀತ ಕಲಾವಿದರ ಸಾಂಸ್ಕೃತಿಕ ಸಂಗೀತ ಜಾತ್ರೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮವನ್ನು ಪುರಾಣ ಪ್ರವಚನ ರತ್ನ ಸಿಂದಗಿಯ ಶಂಕ್ರಯ್ಯ ಶಾಸ್ತ್ರಿ ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು. ಸಾನಿಧ್ಯವನ್ನು ಶೀಲವಂತಯ್ಯ ಗದ್ದುಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹೇಶ ಆನೆಗುಂದಿ,ನಗರ ಯೋಜನಾ ಮಾಜಿ ಅಧ್ಯಕ್ಷ ಗುರು ಎಸ್ ಕಾಮಾ, ಶಂಭುಲಿಂಗ ಗೋಗಿ ,ನಗರಸಭೆ ಸದಸ್ಯ ರಾಘವೇಂದ್ರ ಯಕ್ಷಂತಿ. ರವೀಂದ್ರನಾಥ್ ಚೌಧರಿ. ಸತ್ಯನಾರಾಯಣ ದೊರೆ ವಹಿಸಿದ್ದರು.

Contact Your\'s Advertisement; 9902492681

ಕಾರ್ಯಕ್ರಮವನ್ನು ಸೇವಾ ಸಮಿತಿಯ ಅಧ್ಯಕ್ಷರಾದ ಶರಣು ಬಿ ಗದ್ದುಗೆ ನೇತ್ರತ್ವ ವಹಿಸಿದರು.ಅನೇಕ ಕಲಾವಿದರು ಹಾಡುಗಳನ್ನು ಹಾಡಿ ನೆರೆದ ಜನರನ್ನು ರಂಜಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮದ ಸಹಕಾರ ನೀಡಿತ್ತು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಗೌರವಿಸಲಾಯಿತು.ಬಸವರಾಜ, ಸಂಜು ಬೊಮ್ಮಣ್ಣಿ,ಡಾ ನಾಗರಾಜ,ಮಲ್ಲಯ್ಯ,ಗಣೇಶ ಪತ್ತಾರ,ಗಂಗಾಧರ ಹೊಟ್ಟೆ, ಕವಿತಾ ಪತ್ತಾರ,ಬಾಲು ಆರ್ ಕೆ ಕಲಾವಿದರು ಕಾರ್ಯಕ್ರಮ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here