ನೀವು‌ ನನ್ನನ್ನು ಮಣ್ಣಲ್ಲಿ ಹೂಳಿದಷ್ಟು ನಾನು ಮತ್ತೆ ಚಿಗುರುತ್ತೇನೆ-ಉರ್ದು ಶಾಯಿರಿ ಮೂಲಕ ಎದುರಾಳಿಗಳಿಗೆ ಖರ್ಗೆ ಟಾಂಗ್

1
230

ಕಲಬುರಗಿ: ಸಂವಿಧಾನ ದೇಶವನ್ನು ಮುನ್ನಡೆಸಬೇಕು ಎನ್ನುವುದು ಕಾಂಗ್ರೇಸ್ ಇಚ್ಛೆ ಆದರೆ‌ ಆರ್ ಎಸ್ ಎಸ್ ಚಿಂತನೆಗಳೊಂದಿಗೆ ದೇಶ ನಡೆಸಬೇಕೆನ್ನುವುದು ಮೋದಿ ಇಚ್ಛೆ. ಇದೇ ವಿಚಾರದಲ್ಲಿ ಕಾಂಗ್ರೇಸ್ ಅವರ ಚಿಂತನೆಗಳ ವಿರುದ್ದ ಹೋರಾಡುತ್ತಿದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅವರು ಇಂದು ಖದೀರ್ ಚೌಕ್ ಬಳಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದು ಬಿಜೆಪಿ ಹಾಗೂ ಮೋದಿ ವಿರುದ್ದ ದೇಶದ ಜಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿರುವ ಎಲ್ಲ ಪಕ್ಷಗಲು ಒಗ್ಗಟ್ಟಾಗಿ ಈ ಸಲದ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ಬರದಂತೆ ಹೋರಾಡುತ್ತಿವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು. ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ವಿರುದ್ದ ಅನ್ಯಾಯವಾದಾಗ ನಾವು ಸಂಸತ್ ನಲ್ಲಿ ಅದರ ವಿರುದ್ದ ದನಿ ಎತ್ತುತ್ತಿದ್ದೇವೆ. ನನ್ನೊಂದಿಗೆ ಕೇವಲ 44 ಸಂಸದರಿದ್ದರೂ ನಾನು ಹಾಗೂ ನಮ್ಮವರು ಮೋದಿಗೆ ಹೆದರದೆ ಅವರನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.

Contact Your\'s Advertisement; 9902492681

“ಇಲ್ಲಿ ಜಾಧವ್ ಎಲೆಕ್ಷನ್ಗೆ ನಿಂತಿದ್ದರೂ ಬಿಜೆಪಿಯವರು ಮೋದಿಯನ್ನು ನೋಡಿ ಓಟು ಹಾಕಿ ಅಂತಿದ್ದಾರೆ. ಹುಡುಗನನ್ನು ನೋಡಲು ಬಂದವರು ಅವರ ಅಪ್ಪನನ್ನು ನೋಡಿ ಹುಡುಗಿಯನ್ನು ಕೇಳಿದಂತೆ ಇದು” ಎಂದು ವ್ಯಂಗ್ಯವಾಡಿದರು. ಸಂಸದನಾಗಿ ನನ್ನ ಶಕ್ತಿ ಮೀರಿ ಆಭಿವೃದ್ದಿ ಮಾಡಿದ್ದೇನೆ. ಆದರೂ ನನ್ನನ್ನು ಸೋಲಿಸಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಶಕ್ತಿಗಳು ಪ್ರಯತ್ನಿಸುತ್ತಿವೆ. ಅದನ್ನು ತಡೆಯುವ ಹಾಗೂ ನನ್ನ ಹಣೆಬರಹವನ್ನು ಬರೆಯುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ ಅದನ್ನು ನೀವು ನನಗೆ ಓಟು ಹಾಕುವ ಮೂಲಕ ತೋರಿಸಿ ಎಂದು ಮನವಿ ಮಾಡಿದರು.

” ನಾನು ಬೀಜವಿದ್ದಂತೆ ನನ್ನನ್ನು ನೀವು ಮಣ್ಣಲ್ಲಿ ಹೂಳಿದಷ್ಟು ನಾನು ಮತ್ತೆ ಚಿಗುರುತ್ತೇನೆ” ಎಂದು ಉರ್ದು ಶಾಯಿರಿ ಹೇಳುವ ಮೂಲಕ ಎದುರಾಳಿಗಳಿಗೆ ಟಾಂಗ್ ನೀಡಿದರು. ವೇದಿಕೆ ಮೇಲೆ‌ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಸೇರಿದಂತೆ ಮತ್ತಿತರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here