ವೈಜ್ಞಾನಿಕ ಸಮಾಜದಿಂದ ಶೋಷಣೆಗೆ ಒಳಗಾದವರ ವಿಮೋಚನೆ ಸಾಧ್ಯ

0
8

ಶಹಾಬಾದ: ವೈಜ್ಞಾನಿಕ ಸಮಾಜವಾದದಿಂದ ಮಾತ್ರ ದುಡಿಯುವ ಜನತೆಯ, ಬಡವರ, ಶೋಷಣೆಗೆ ಒಳಗಾದವರ ವಿಮೋಚನೆ ಸಾಧ್ಯ ಎಂದು ಮಹಾನ್ ತತ್ವಜ್ಞಾನಿಯಾದ ‘ಕಾರ್ಲ್ ಮಾಕ್ರ್ಸ್ ಅವರ ಕನಸಾಗಿತ್ತು ಎಂದು ಎಸ್‍ಯುಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್. ಇಬ್ರಾಹಿಂಪೂರ ಹೇಳಿದರು.

ಅವರು ಎಸ್‍ಯುಐ (ಸಿ) ಪಕ್ಷದ ಕಚೇರಿಯಲ್ಲಿ ಎಸ್.ಯು.ಸಿ.ಐ (ಸಿ) ಪಕ್ಷದ ಸ್ಥಳೀಯ ಸಮಿತಿಯಿಂದÁಯೋಜಿಸಲಾದ ವಿಶ್ವ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾರ್ಲ್ ಮಾಕ್ರ್ಸ್ ರವರ 140ನೇ ಸ್ಮರಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಬಂಡವಾಳಶಾಹಿ ಮಾರುಕಟ್ಟೆಯು ಇಂದು ಸಂಕುಚಿತಗೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಕ್ಕಟ್ಟು ಆವರಿಸಿದೆ. ಈ ಹಿನ್ನೆಲೆಯಲ್ಲಿಯೇ ವಿಶ್ವದ ಹಲವು ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ಮಾಕ್ರ್ಸ್‍ದವನ್ನು ಮೊದಲ ಬಾರಿಗೆ ಸತ್ಯವೆಂದು ಸಾಬೀತು ಮಾಡಿದ ಮಹಾನ್ ಲೆನಿನ್ ರμÁ್ಯದಲ್ಲಿಯೇ ವಿಶ್ವದ ಮೊದಲ ಸಮಾಜವಾದಿ ದೇಶವನ್ನು ಸ್ಥಾಪಿಸಿ, ಇಡೀ ನಾಗರೀಕತೆಯಲ್ಲಿಯೇ ಉತ್ಕøಷ್ಟವಾಗಿರುವ ಮಾನವ ಸಮಾಜದ ಹೊಸ ನಾಗರಿಕತೆಯನ್ನೇ ಬೆಳೆಸಿದರು. ಅಂತಹ ರμÁ್ಯ ದೇಶವು ಸ್ಟಾಲಿನ್ ನಂತರದ ದಿನಗಳಲ್ಲಿ ಪರಿಷ್ಕರಣವಾದಕ್ಕೆ ಬಲಿಯಾಗಿ ಮತ್ತೆ ಸಾಮ್ರಾಜ್ಯಶಾಹಿ ದೇಶವಾಗಿ ಇಂದು ಯುಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.

ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಈ ಪ್ರತಿಜ್ಞೆಯನ್ನು ತೆಗೆದುಕೊಂಡು ಸಂಘಟಿತರಾಗಿ ಹೋರಾಡಲು ನಮ್ಮನ್ನೆ ನಾವು ಸಿದ್ಧಗೊಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಜನತೆ ಒಂದಾಗಿ ಜನರೇ ಒಂದು ಹೋರಾಟದ ಶಕ್ತಿಯಾಗಬೇಕು ಎಂದು ಹೇಳಿದರು.
ಎಸ್.ಯು.ಸಿ.ಐ. (ಸಿ) ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ, ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಜಗನ್ನಾಥ.ಎಸ್.ಹೆಚ್ ವಹಿಸಿದ್ದರು.. ಕಾರ್ಯಕ್ರಮದಲ್ಲಿ ಬಾಗಣ್ಣ ಬುಕ್ಕ, ರಮೇಶ ದೇವಕರ, ಶಿವಕುಮಾರ್, ಆನಂದ, ಪ್ರವೀಣ ರಾಧಿಕಾ, ಸೇರಿದಂತೆ ಹಲವರು ಭಾಗವಹಸಿದ್ದರು.

ನಮ್ಮ ದೇಶದಲ್ಲಿಯೂ ಬಂಡವಾಳಗಾರರು ವಿಶ್ವದ ಅಗರ್ಭ ಶ್ರೀಮಂತರ ಮಟ್ಟದಲ್ಲಿ ಬೆಳೆದಿದ್ದಾರೆ. ನಮ್ಮನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಈ ಬಂಡವಾಳಗಾರರ ಗುಲಾಮರಾಗಿ ದೇಶದ ಸಂಪತ್ತನ್ನು ಮತ್ತು ದೇಶದ ಜನತೆಯ ಶ್ರಮವನ್ನು ಲೂಟಿ ಹೊಡೆಯುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದರ ಕಾರಣದಿಂದಾಗಿಯೇ ಇಂದು ನಿರುದ್ಯೋಗ, ಬೆಲೆ ಏರಿಕೆ, ಬಡತನಗಳು ದೇಶದ ಜನರ ದುಸ್ಥಿತಿಗೆ ಕಾರಣವಾಗಿದೆ. ಆದ್ದರಿಂದಲೇ ನಮ್ಮ ನೆಲದಲ್ಲಿಯೂ ಸಮಾಜವಾದಿ ಕ್ರಾತಿಯನ್ನು ನೆರವೇರಿಸಿದರೆ ಮಾತ್ರ ಈ ಎಲ್ಲಾ ಶೋಷಣೆಗೂ ಮುಕ್ತಿ ಹೊಂದಬಹುದು – ರಾಘವೇಂದ್ರ ಎಂ.ಜಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here