ಕಲಬುರಗಿ: ತಾಲೂಕಿನ ಶ್ರೀನಿವಾಸಸರಡಗಿ ಗ್ರಾಮದ ಮಹಾಲಕ್ಷ್ಮೀ ಶಕ್ತಿ ಪೀಠದ 36ನೇ ಸಂಭ್ರಮದ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಾವೈಕ್ಯ ಧರ್ಮ ಸಭೆಯನ್ನು ನಿರಗುಡಿ ಪೂಜ್ಯಶ್ರೀ ಹವಾ ಮಲ್ಲಿನಾಥ ಮಹಾರಾಜರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ವಿಷ್ಣುದಾಸ ಮೋಹನ ಪ್ರಸಾದ ತಾಪಡಿಯಾ, ಯುವರಾಜ ಎಸ್. ಸಾಹು, ಸುನಿಲ ಅಣ್ಣಾರಾವ ಪಾಟೀಲ, ವೈಜಿನಾಥ ಮಾಣಿಕಪ್ಪ ಪಂಡರರ್ಗಿ, ರಾಜಶೇಖರ ಸಿರಿ ಜೇವರ್ಗಿ ಇವರಿಗೆ ಶ್ರೀ ಶಕ್ತಿ ಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಭಾನುವಾರ ಶ್ರೀ ದೇವಿಗೆ ಮಹಾಭಿಷೇಕ ಮಹಾ ಅಲಂಕಾರ, ಗಂಗಾಪೂಜೆ, 911 ಬಾಲ ಮುತೈದೆಯರ ಪಾದ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗ್ರಾಮದ ಪ್ರಮುಖ ರಾಜ ಬೀದಿಯಿಂದ ಶ್ರೀ ದೇವಿ ಶಕ್ತಿ ಪೀಠದವರೆಗೆ ಆನೆ ಅಂಬಾರಿ ಮೇಲೆ ದೇವಿಯ ಭವ್ಯ ಮೆರವಣಿಗೆ, ಬಂಜಾರ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ ಶಕ್ತಿ ದೇವಿಯ ಭವ್ಯ ರಥೋತ್ಸವ ಕಾರ್ಯಕ್ರಮ ನಡೆಯಿತು. ನಂತರ ಶಕ್ತಿ ಪೀಠಾದಿಪತಿಗಳಿಗೆ ತುಲಾಭಾರ ಜರುಗಿತು.
ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ, ಬಡದಾಳ ತೇರಿನಮಠದ ಶ್ರೀ ಷ.ಬ್ರ.ಡಾ.ಚನ್ನಮಲ್ಲ ಶಿವಾಚಾರ್ಯರ ನೇತೃತ್ವ ವಹಿಸಿದ್ದರು. ವಿರಕ್ತಮಠ ಮಾದನಹಿಪ್ಪರ್ಗಾದ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು, ಮುಗುಳನಾಗಾಂವ ಕಟ್ಟಿಮನಿ ಹಿರೇಮಠದ ಶ್ರೀ ಪಬ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಭರತನೂರ ವಿರಕ್ತಮಠದ ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಸಾನಿಧ್ಯ, ಶ್ರೀ ಷ.ಬ್ರ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀ ಮ.ನಿ.ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ಷ.ಬ್ರ ಸೋಮಶೇಖರ ಶಿವಾಚಾರ್ಯರು, ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯರು, ಶ್ರೀ ಪೂಜ್ಯ ಶರಣಯ್ಯ ಸ್ವಾಮಿಗಳು, ಮಹೇಶ ನೇತಿ ಹೈದ್ರಾಬಾದ, ಜಿ. ರಾಮಚಂದ್ರ ಎಸ್.ಬಗಲೆ, ಸತಿಶ ಗುತ್ತೇದಾರ, ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ಅರುಣ ಸಿ.ಪಾಟೀಲ ರೇವೂರ, ಜಯಶ್ರೀ ಮತ್ತಿಮಡು, ಚಂದ್ರಿಕಾ ಪರಮೇಶ್ವರ, ರಮೇಶ ಜಿ. ತಿಪ್ಪನೂರ್, ಚೈತನ ಗೋನಾಯಕ, ಆರ್.ಎಸ್.ಪಾಟೀಲ, ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ ಸೇರಿದಂತೆ ಭಕ್ತಾಧಿಗಳು ಇದ್ದರು.