ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ಹೆಚ್ಚಳದ ಜತೆಗೇ ಉದ್ಯೋಗ ಕುರಿತಾದ ತರಬೇತಿ ಹಾಗೂ ಉದ್ಯೋಗ ದೊರಕುವಂತಾಗಲು ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.ಬಸವರಾಜ ಗಾದಗಿ ಹೇಳಿದರು.
ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ನಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಹಾಗೂ ವಿವಿಯ ಯಾರ್ಂಕ್ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸೆಂಟರ್ ಆಫ್ ಎಕ್ಸಲೆನ್ಸ್ ದಿಂದ ಸ್ಥಳದಲ್ಲೇ ಈ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ- ದೊಡ್ಡ ಕಂಪನಿಗಳಲ್ಲಿ ನೌಕರಿ ದೊರಕಲು ಅನುಕೂಲವಾಗುತ್ತದೆ. ಒಟ್ಟಾರೆ ಸೆಂಟರ್ ಆಪ್ ಎಕ್ಸಲೆನ್ಸ್ ದಿಂದ ತರಬೇತಿ ಜತೆಗೆ ನೌಕರಿ ಸಿಗಲಿದೆ
ಮುಂದಿನ ದಿನಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಕುಲಪತಿ ಪೆÇ್ರ. ವಿದ್ಯಾಶಂಕರ ಅವರು ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೆ ಆಗಮಿಸಿ ಈ ಕುರಿತು ಪರಿಶೀಲಿಸಿ ಚಾಲನೆ ನೀಡುವರು ಎಂದು ಗಾದಗಿ ವಿವರಣೆ ನೀಡಿದರು.
ರಾಜ್ಯದ 225 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಮ್ಮ ವಿಟಿಯು ಪ್ರಾದೇಶಿಕ ಕೇಂದ್ರ ಟಾಪ್ 10 ರೊಳಗಿನ ಸಾಧನೆ ಮಾಡಿದೆ. ಅದಲ್ಲದೇ ನಾಲ್ಕು ಪ್ರಾದೇಶಿಕ ಕೇಂದ್ರಗಳಲ್ಲಿ 9 ರ್ಯಾಂಕ್‍ಗಳು ತಮ್ಮ ಕೇಂದ್ರ ಕ್ಕೆ ಬಂದಿವೆ ಎಂದು ಅವರು ತಿಳಿಸಿದರು.
ವಿಟಿಯು ಮಹಿಳಾ ಶಿಕ್ಷಣ ಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಶೇ.65 ರಷ್ಟು ವಿದ್ಯಾರ್ಥಿನಿಯರೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ ಜತೆಗೆ ಲ್ಯಾಪ್‍ಟಾಪ್, ಪೆÇ್ರಜೆಕ್ಟ್ ಗೆಂದು ಐದು ಸಾವಿರ ರೂ ಪೆÇ್ರೀತ್ಸಾಹ ಧನ ಸೇರಿ ಇತರ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ನಿರ್ದೇಶಕ ಪೆÇ್ರ.ಗಾದಗಿ ಹೇಳಿದರು.