ರಟಕಲ್ ಗ್ರಾಮದಲ್ಲಿ ಪೊಲೀಸರಿಂದ ವಿವಾದ ಸೃಷ್ಟಿ: ಕಂಪೌಂಡ ತೆರವೆಗೆ ಮನವಿ

0
355

ಕಲಬುರಗಿ: ಹಿಂದೂ ಮುಸ್ಲಿಂರು ಸೌಹಾರ್ದ ನೆಲವಾದ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿನ ಐತಿಹಾಸಿಕ ಮಹೆಬೂಬ್ ಸುಬಹಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಕಾಂಪೌಂಡ್ ಗೋಡೆ ಕಟ್ಟುವ ಮೂಲಕ ಪೋಲಿಸರಿಂದಲೇ ಗ್ರಾಮಸ್ಥರ ಮಧ್ಯೆ ಕೋಮು ದ್ವೇಷದ ಬಿತ್ತುವ ಕೆಲಸ ನಡೆದಿದೆ ನ್ಯಾಯವಾದಿ ಅಶ್ವಿನಿ ಮದನಕರ್ ಆರೋಪಿಸಿದರು.

ಗ್ರಾಮದ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಪೊಲೀಸರು ಕಟ್ಟಿರುವ ಕಂಪೌಂಡ ಗೋಡೆ ತೆರವುಗೊಳ್ಳುವಂತೆ ಒತ್ತಾಯಿಸಿ ಸೌಹಾರ್ದ ಸಮಿತಿ ವತಿಯಿಂದ ರಟಕಲ್ ಪೊಲೀಸ್ ಠಾಣೆಗೆ ಮಂಗಳವಾರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಮಾತನಾಡಿದರು.

Contact Your\'s Advertisement; 9902492681

ಶತಮಾಗಳಷ್ಟು ಹಳೆಯದಾದ ಹಜರತ್ ಮಹೆಬೂಬ್ ಸುಬಾನಿ ದರ್ಗಾದ ಹಳೆಯ ಪ್ರವೇಶ ದ್ವಾರಕ್ಕೆ ಕಾಂಪೌಂಡ್ ಗೋಡೆ ಕಟ್ಟುವ ಮೂಲಕ ಪೊಲೀಸರು ಭಕ್ತರ ಭಾವನೆಗೆ ಮತ್ತು ಅವರ ನಂಬಿಕೆಗೆ ಅವಮಾನಿಸಿದ್ದಾರೆ ಎಂದು ದೂರಿದವರು.

ಪೊಲೀಸ್ ಠಾಣೆಗೂ ಮೊದಲು ದರ್ಗಾ ಇತ್ತು. ಆದರೆ, ನಂತರದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಜೆ ಜಮೀನು ಖರೀದಿಸಿರಬಹುದು. ಆದರೆ ದರ್ಗಾ ಮತ್ತು ಭಕ್ತರ ಭಾವನೆ ಖರೀದಿಸಲು ಸಾದ್ಯವಿಲ್ಲ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಮೇಶ್ ಕೆ ರಾಗಿ ಮಾತನಾಡಿ, ಪೊಲೀಸ್ ಇಲಾಖೆ ಸಾರ್ವಜನಿಕರ ಸಂಕಟಕ್ಕೆ ಸ್ಪಂದಿಸಲು ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು. ಆದರೆ, ಇಲ್ಲಿನ ಪೊಲೀಸ್ ಅಧಿಕಾರಿಗಳು ಹಜರತ್ ಮಹೆಬೂಬ್ ಸುಬಾನಿ ದರ್ಗಾಕ್ಜೆ ಹೋಗುವ ಅತ್ಯಂತ ಹಳೆಯ ರಸ್ತೆಗೆ ಕಾಂಪೌಂಡ್ ಗೋಡೆ ನಿರ್ಮಿಸುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ದೇವರ ದರ್ಶನ ಮಾಡಲು ಸಮಸ್ಯೆ ಉಂಟಾಗುತ್ತಿದೆ, ಹಾಗಾಗಿ, ಈ ಕೂಡಲೇ ಕಾಂಪೌಂಡ್ ಗೋಡೆ ತೆರವುಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶಮಾಡಿಕೊಡಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಿಕ್ರಮ್ ತೆಜಸ್, ಮೊದ್ದೀನ್ ಸಾಬ್, ಜೇಜಿ ಮುತ್ಯ, ಮೊಹಮ್ಮದ್, ಪ್ರಿಯಾಂಕಾ ಮಾವಿನಕರ್, ಮಕ್ಬೂಲ್ ಸಾಬ್ ಹಾಗೂ ನೂರಾರು ಗ್ರಾಮಸ್ಥರು ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here