ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

0
32

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು ಮತ್ತು ಓವರ್ ಹೆಡ್ ಟ್ಯಾಂಕ್ ನೀರನ್ನ ಬ್ಲೀಚಿಂಗ್ ಪೌಡರ್ ನಿಂದ ಸ್ವಚ್ಛಗೊಳಿಸಿ ಕುಡಿಯಲು ಯೋಗ್ಯವಾದ ನೀರನ್ನು ತುಂಬಿಸಬೇಕು ಎಂದು ಜೆಡಿಎಸ ಜಿಲ್ಲಾ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಸರ್ಕಾರಕ್ಕೆ ಆಗ್ರಹಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ರಾಜ್ಯದಾದ್ಯಂತ ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ ರೋಗಗಳಿಗೆ ಮಹಿಳೆಯರು, ಮಕ್ಕಳು, ವೃದ್ಧರು ಬಹು ಬೇಗನೆ ಈ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ರೋಗಕ್ಕೆ ತುತ್ತಾದವರ ಸಾಕಷ್ಟು ಪ್ರಕರಣಗಳು ಗಣನೀಯವಾಗಿ ದಾಖಲಾಗುತ್ತಿವೆ, ಈಗ ಮಳೆಗಾಲವೂ ಆಗಿರುವುದರಿಂದ ನೀರು ಸಂಗ್ರಹ ವಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ರೋಗಗಳು ಹರಡಲು ತುಂಬಾ ಅನುಕೂಲಕರವಾಗಿದೆ, ಹಾಗಾಗಿ ಈ ರೋಗಗಳಿಗೆ ಕಾರಣವಾದ ಕೊಳಚೆ ನೀರು ನಿಲ್ಲುವ ಸ್ಥಳ, ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಬೇಕು ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಬೇಕು ಎಂದು ಗುತ್ತೇದಾರ ಆಗ್ರಹಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here