SSLC ಪರೀಕ್ಷೆ: ಪೋಲಿಸರ ಹೈ ಅಲರ್ಟ

0
17

ಮಾಧನಹಿಪ್ಪರಗಿ: ಸ್ಥಳೀಯ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಬಿಗಿ ಪೊಲೀಸ್ ಬಂದೋಬಸ್ತದಿಂದ ನಡೆಯುತ್ತಿದ್ದು ಕಂಡು ಬಂತು.

ಈ ಮೊದಲಿನಿಂದಲೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡಗಳಲ್ಲಿ ನಡೆಯುತ್ತಿದ್ದವು. ಕಲಬುರಗಿ ಪ್ರೌಢ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಗರೀಮಾ ಪಂವಾರ ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೇಂದ್ರಕ್ಕೆ ಬೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಕಾಲೇಜಿಗೆ ಸೂಕ್ತವಾದ ಕಂಪೌಂಡ ಇಲ್ಲದಿರುವುದು ಮತ್ತು ಕೇಂದ್ರದಲ್ಲಿ ನಡೆಯುತ್ತಿದ್ದ ನಕಲು ಇದೆಲ್ಲವನ್ನು ಮನಗಂಡು 2023ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಹಿನ್ನಲೆಯಲ್ಲಿ ಈ ವರ್ಷದ ಪರೀಕ್ಷೆಗಳು ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆ ಕಟ್ಟಡದಲ್ಲಿ ನಡೆಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಿರಿಯ ಅಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಯರನ್ನು ಕರೆಯಿಸಿ ಸಭೆ ನಡೆಸಿದ ನಂತರ ಸರಕಾರಕ್ಕೆ ವರದಿ ಮಾಡಲಾಯಿತು. ಆದುದರಿಂದ ಈ ವರ್ಷದ ಹತ್ತನೆ ತರಗತಿಯ ಪರೀಕ್ಷೆಗಳು ಹೆಚ್ಚಿನ ಪೊಲೀಸರ ಬಿಗಿಬಂದೋಬಸ್ತಿನಲ್ಲಿ ನಡೆಯುತ್ತಿವೆ.

Contact Your\'s Advertisement; 9902492681

ಇಲ್ಲಿನ ಪರೀಕ್ಷಾ ಕೇಂದ್ರಕ್ಕೆ ಮದಗುಣಕಿ, ನಿಂಗದಳ್ಳಿ ಅಲ್ಲದೆ ಸ್ಥಳೀಯ ಸರಕಾರಿ ಪ್ರೌಢಶಾಲೆ, ಮೂರು ಖಾಸಗಿ ಶಿಕ್ಷಣ ಸಂಸ್ಥೆಯ ಒಟ್ಟು 375 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇಂದು ನಡೆದ ಪರೀಕ್ಷೆಗೆ 65 ವಿದ್ಯಾರ್ಥಿಗಳು ಗೈರು ಹಾಜರಿದ್ದರು. ಒಟ್ಟು 12 ಕೋಣೆಗಳಲ್ಲಿ ತಲಾ 24 ವಿದ್ಯಾರ್ಥಿಗಳು ಪರಿಕ್ಷೆ ಬರೆಯುತ್ತಿದ್ದರು. ಎಂದು ಮುಖ್ಯ ಪರೀಕ್ಷಾ ಆಧೀಕ್ಷಕರಾಧ ಟ.ಆರ್.ಪಾಟೀಲ ಹಾಗೂ ಸ್ಥಾನಿಕ ಜಾಗೃತ ದಳದ ಬಸವರಾಜ ದೊಡಮನಿ ಹೇಳಿದರು. ಪೋಲಿಸ ಅಧಿಕಾರಿಗಳಾದ ಮಾರುತಿ ಕೌಲಗಾ. ಶಿವಲಿಂಗಯ್ಯ ಹಾಗು ಸಿಬ್ಬಂಧಿಗಳಾದ ಮಲ್ಲಿನಾಥ, ಮಾಳಪ್ಪ, ಗೌತಮ ಇನ್ನಿತರ ಸಿಬ್ಬಂಧಿಗಳು ಪರೀಕ್ಷಾ ಕೇಂದ್ರ ಸುತ್ತ ಯಾರನ್ನು ಬಿಡುತ್ತಿರಲಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here