ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್,ರಿಗೆ ನುಡಿ ನಮನ

0
28

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿ ಯ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ (೫೩) ಕೊರೊನೊ ಸೊಂಕಿಗೆ ಬಲಿಯಾಗಿದ್ದು,ಇಂದು ಅವರ ಆತ್ಮಕ್ಕೆ ಶಾಂತಿ ಸಲ್ಲಿಸಲೆಂದು ನಗರದ ಪತ್ರಿಕಾ ಭವನದಲ್ಲಿ ಶ್ರಧ್ರಾಂಜಲಿ ಕಾಯ೯ಕ್ರಮ ಮಾಡುವ ಮೂಲಕ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅನೇಕ ಪತ್ರಕರ್ತರು,ಹಿತೈಷಿಗಳು ನುಡಿನಮನ ಸಲ್ಲಿಸುತ್ತಾ ಮಾತನಾಡಿ, ದಕ್ಷ ಹಾಕೂ ಬದ್ದತೆ ಪತ್ರಕರ್ತರಲ್ಲಿ ಕಾಗಲಕರ್ ಅವರು ಒಬ್ಬರಾಗಿದ್ದರು. ಎಲ್ಲರೊಂದಿಗೆ ಅವರ ಒಡನಾಟ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದರು.

Contact Your\'s Advertisement; 9902492681

ಜಯತೀರ್ಥ ಕಾಗಲಕರ್ ಅವರನ್ನು ಕಳೆದುಕೊಂಡು ಕಲಬುರಗಿಗೆ ಹಾಗೂ ಪತ್ರಕರ್ತರ ಸಂಘಕ್ಕೆ ತುಂಬಲಾರದ ಭಾರಿ ನಷ್ಟವಾಗಿದೆ.ಮೂರು ದಶಕಗಳಿಂದ ಹಲವು ಜನಪರ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದ ಕಾಗಲಕರ್ ಅವರ ಅಗಲುವಿಕೆಗೆ ಸಂಸದರು, ಶಾಸಕರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ. ಆವರ ಕುಟುಂಬದ ವರ್ಗಕ್ಕೆ ಸರ್ಕಾರದ ವತಿಯಿಂದ ಹಾಗೂ ಪತ್ರಕರ್ತರ ಸಂಘದ ವತಿಯಿಂದ ಆರ್ಥಿಕವಾಗಿ ಸಹಾಯವಾಗಬೇಕೆಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವಿಜಯವಾಣಿ ಸ್ಥಾನಿಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ, ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ವಾರ್ತಾ ಅಧಿಕಾರಿ ಸಿದ್ದೇಶ್ವರ, ಹಿರಿಯ ಪತ್ರಕರ್ತರಾದ ಜಯತೀರ್ಥ ಪಾಟೀಲ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಕಲಬುರಗಿ ಆವೃತ್ತಿಯ ಮ್ಯಾನೇಜರ್ ಯು.ವಸುಧೇಂದ್ರ, ಹಿರಿಯ ಉಪಮುಖ್ಯ ಸಂಪಾದಕ ಸುಭಾಣ ಬಣಗಾರ್, ಕನ್ನಡ ಪ್ರಭ ಸ್ಥಾನಿಕ ಸಂಪಾದಕ ಶೇಷಮೂರ್ತಿ ಅವದಾನಿ, ಉದಯವಾಣಿ ಸ್ಥಾನಿಕ ಸಂಪಾದಕರಾದ ಹಣಮಂತರಾವ ಬೈರಾಮಡಗಿ, ಹಿರಿಯ ಪತ್ರಕರ್ತರಾದ ಬಾಬುರಾವ ಯಡ್ರಾಮಿ, ದೇವೇಂದ್ರ ಕಪನೂರ, ದೇವೇಂದ್ರಪ್ಪಾ ಅವಂಟಿ, ರಾಜು ಮನಿಷ, ಮನೋಜಕುಮಾರ ಗುದ್ದಿ, ಹೆಚ್ ಶೇಷಗಿರಿ, ಭೀಮಾಶಂಕರ ಫಿರೋಜಾಬಾದ, ಸಂಗಮನಾಥ ರೇವತಗಾಂವ್, ಗಿರೀಶ್ ಕುಲಕರ್ಣಿ, ರಾಘವೇಂದ್ರ ಶರ್ಮಾ, ಜಿ.ಎಂ. ಪಾಟೀಲ, ರಾಜು ಕುಲಕರ್ಣಿ, ಪ್ರಕಾಶ ಉಡಚಣ, ರವಿ ಕುಲಕರ್ಣಿ, ವಿನೋದ್ ದೇಸಾಯಿ, ಸಂಜು ರಾಠೋಡ, ಮುಕುಂದ, ರಾಜು ಮ್ಯಾಳಗಿ, ರಾಚ್ಚಪ್ಪಾ, ಛಾಯಗ್ರಾಹಕರಾದ ರಾಜು ಕೋಷ್ಟಿ, ಮಂಜುನಾಥ್ ಜಮಾದಾರ ಸೇರಿದಂತೆ ಅನೇಕರ ಪತ್ರಕರ್ತರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here