ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ; ‘ಸಾಮಾಜಿಕ ಜವಾಬ್ದಾರಿ ಪತ್ರಕರ್ತರಲ್ಲಿ ಹೆಚ್ಚಲಿ’

0
33

ಕಲಬುರಗಿ : ಇಂದು ಪತ್ರಿಕೆ ಮೌಲ್ಯ ಎತ್ತಿ ಹಿಡಿಯಲು ಪತ್ರಕರ್ತರು ಜವ್ದಾರಿಯಿಂದ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಕಲ್ಯಾಣ ಕಹಳೆ ಮಾಸಿಕ ಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಧಕರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಆನಸಾಮಾನ್ಯರ ಪ್ರೀತಿ ಮತ್ತು ವಿಶ್ವಾಸದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಾಮಾಜಿಕ ತತ್ವಾದರ್ಶಗಳು ಎತ್ತಿ ಹಿಡಿಯಬೇಕು. ಜೊತೆಗೆ ಸಾಮಾಜದ ಅಂಕು ಡೊಂಕುಗಳನ್ನು ತಿದ್ದುವ ಬರಹಗಳು ಹರಿತವಾಗಿರಬೇಕು ಎಂದರು.

ಶ್ರೀನಿವಾಸ ಸರಡಗಿಯ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಮಾಜಿ ಮಹಾಪೌರ ಸಂತೋಷ ಪಾಟೀಲ ದುಧನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಉದ್ದಿಮೆದಾರರ ವಿನೋದ ಪಾಟೀಲ ಅತಿಥಿಗಳಾಗಿದ್ದರು. ಕಲ್ಯಾಣ ಕಹಳೆ ಮಾಸ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕಹಳೆ ಪ್ರಶಸ್ತಿಯನ್ನು ಪ್ರಭುಲಿಂಗ ನೀಲೂರೆ, ಜಗನ್ನಾಥ ಶೇರಿಕಾರ, ವಿಜಯಕುಮಾರ ಕಲ್ಲಾ, ಆರ್ ಜೆ ವಾಣಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಬಿ ಎಚ್ ನಿರಗುಡಿ, ಅಂಬಾರಾಯ ಮಡ್ಡೆ, ಶರಣಬಸಪ್ಪ ವಡ್ಡನಕೇರಿ, ಅಂಬಾರಾಯ ಕೋಣೆ, ಬಸವಂತರಾಯ ಕೋಳಕೂರ, ಸಿಪಿಐ ದೌಲತ್ತ, ಚಿಸಿ ನಿಂಗಣ್ಣ, ಆನಂದ ಸಿದ್ದಮಣಿ, ವಿಜಯಕುಮಾರ ಪರುತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here