ಕಲಬುರಗಿಯಲ್ಲಿ ಕಡಿಮೆ ಮತದಾನ: ಮತಗಟ್ಟೆಗಳಿಗೆ ಸ್ವೀಪ್ ನೋಡಲ್ ಅಧಿಕಾರಿ ಭೇಟಿ

0
24

ಕಲಬುರಗಿ: ಮತದಾರರಲ್ಲಿ ಜಾಗೃತಿ ಮೂಡಿಸುವ‌ ಸ್ವೀಪ್ ಚಟುವಟಿಕೆಯಲ್ಲಿ ಭಾಗವಹಿಸಲು ಶನಿವಾರ ಕಲಬುರಗಿಗೆ ಆಗಮಿಸಿದ ಸ್ವೀಪ್ ಸಮಿತಿಯ ರಾಜ್ಯ ಮಟ್ಟದ ನೋಡಲ್ ಅಧಿಕಾರಿ (ನಿವೃತ್ತ ಐ.ಎ.ಎಸ್ ಅಧಿಕಾರಿ) ಪಿ.ಎಸ್.ವಸ್ತ್ರದ್ ಅವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಜಿಲ್ಲೆಯ ವಿವಿಧ‌ ವಿಧಾನಸಭಾ ಮತಕ್ಷೇತ್ರಗಳ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ ಅವರೊಂದಿಗೆ ಮೊದಲು ಅಫಜಲಪೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ.59.62ರಷ್ಟು ಮತದಾನವಾದ ಗಾಣಗಾಪೂರ ಅತಿಥಿ ಗೃಹ (ಪಶ್ಚಿಮ) ಮತಗಟ್ಟೆ ಸಂ.142 ಮತ್ತು ಶೇ.54.69 ಮತದಾನವಾಗಿರುವ ಚೌಡಾಪುರ ತಾಂಡಾ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ. 137ಕ್ಕೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮತ್ತು ಮೋಬೈಲ್‌ ತಂತ್ರಾಂಶ‌ ಬಳಕೆ ಕುರಿತು ಬಿ.ಎಲ್.ಓ.ಗಳಿಂದ ಮಾಹಿತು ಪಡೆದುಕೊಂಡರು.

Contact Your\'s Advertisement; 9902492681

ಅಲ್ಲಿಂದ‌ ಚಿತ್ತಾಪೂರ ಮತಕ್ಷೇತ್ರದ ಶೇ.28ರಷ್ಟು ಮತದಾನವಾದ ವಾಡಿ ಪಟ್ಟಣದ ಸಂತ್ ಅಂಬ್ರೂಸ್ ಕಾನ್ವೆಂಟ್ ಶಾಲೆ ಎ.ಸಿ.ಸಿ. ಕಂಪನಿ (ಬಲ ಭಾಗ) ಮತಗಟ್ಟೆ ಸಂ.159 ಮತ್ತು ಶೇ.47.19 ರಷ್ಟು ಮತದಾನವಾದ ಭಂಕೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮಧ್ಯ ಭಾಗ (ಸಖಿ ಪಿಂಕ್ ಬೂತ್) ಮತಗಟ್ಟೆ ಸಂ.49ಕ್ಕೆ‌‌ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣಾಧಿಕಾರಿ ನವೀನ್ ಯು. ಅವರು ನೋಡಲ್ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿದರು.

ನಂತರ ಕಲಬುರಗಿಗೆ ಮರಳಿ ಆಗಮಿಸಿದ ಪಿ.ಎಸ್.ಸವ್ತ್ರದ್ ಅವರು ಗುಲಬರ್ಗಾ ದಕ್ಷಿಣ ಕ್ಷೇತ್ರದ ಶೇ.45.18 ರಷ್ಟು ಮತದಾನವಾದ ಕಲಬುರಗಿ ನಗರದ ಬ್ರಹ್ಮಪುರ ಪ್ರದೇಶದಲ್ಲಿರುವ ಎನ್.ವಿ.ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂ.138 ಮತ್ತು ಶೇ.49.35ರಷ್ಟು ಮತದಾನವಾದ ಎನ್.ವಿ.ವಾಣಿಜ್ಯ ಪದವಿ ಕಾಲೇಜು (ಸಖಿ ಪಿಂಕ್ ಬೂತ್) ಮತಗಟ್ಟೆ ಸಂ.132ಕ್ಕೆ ಭೇಟಿ ನೀಡಿದರು.

ಮತದಾನ ಹೆಚ್ಚಳಕ್ಕೆ ಶ್ರಮಿಸುವಂತೆ ಬಿ.ಎಲ್.ಓ.ಗಳಿಗೆ ಕರೆ: ವಾಡಿ ಮತಗಟ್ಟೆ ಭೇಟಿ ನಂತರ‌ ಎ.ಸಿ.ಸಿ ಕಂಪನಿಯ ಸಭಾಂಗಣದಲ್ಲಿ ಬಿ.ಎಲ್.ಓ, ಇತರೆ ಸ್ಥಳೀಯ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಮತದಾನ ಪ್ರಮಾಣ ಹೆಚ್ಚಿಸಲು ಎಲ್ಲರು ಸಾಂಘಿಕವಾಗಿ ಶ್ರಮ ವಹಿಸುವಂತೆ ಕರೆ ನೀಡಿದಲ್ಲದೆ ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ಹಾಗೂ ಮತದಾನ ಮಾಡುವಂತೆ‌ ಜನರಲ್ಲಿ‌ ಪ್ರೇರೇಪಿಸುವ ಕಾರ್ಯಕ್ರಮ ಆತೋಜಿಸಬೇಕು‌ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಬಾರಿ ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ವೇಟಿಂಗ್ ರೂಂ, ವಿಶೇಷಚೇತನರಿಗೆ Ramp ಸೇರಿದಂತೆ‌ ಶೇ.100 ರಷ್ಟು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.

ಕಾರ್ಮಿಕರು ವರ್ಗವು ತಪ್ಪದೆ‌ ಮತ‌ ಚಲಾಯಿಸಬೇಕು. ಮತಗಟ್ಟೆಗೆ ಬರಲಾಗದ 80 ವರ್ಷದ ವಯೋವೃದ್ಧರು ಮತ್ತು ವಿಕಲಚೇತನರಿಗೆ ಮನೆಯಿಂದಲೆ ಮತದಾನಕ್ಕಿರುವ ಅವಕಾಶದ ಬಗ್ಗೆಯೂ ಜಾಗೃತಿ ಮೂಡಿಸುವಂತೆ ಬಿ.ಎಲ್.ಓ.ಗಳಿಗೆ ಪಿ.ಎಸ್.ವಸ್ತ್ರದ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಎಸ್. ರಾಠೋಡ,‌ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್ ಜೊತೆಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here