ಬಡವ- ಬಲ್ಲಿದವರ ಧ್ವನಿಯಾಗಿ ಶಕ್ತಿ ತುಂಬಿದ ಮಹಾಚೇತನ ಅಂಬೇಡ್ಕರ್ ; ನಟ ಚೇತನ್

0
19

ಬಡವರ, ಶೋಷಿತರ, ಮಹಿಳೆಯರ ಹಾಗೂ ಸಮಾನತೆಯ ಪರವಾಗಿರುವ ಸಂವಿಧಾನವನ್ನು ಎಂದಿಗಿಂತಲೂ ಇಂದು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅಂಬೇಡ್ಕರ್ ಹಾಕಿದ ಭದ್ರ ಬುನಾದಿಯ ಸಂವಿಧಾನಕ್ಕೆ ಯುವ ಜನತೆ ಗೋಡೆಗಳಾಗಿ ನಿಲ್ಲಬೇಕಾಗಿದೆ. – ಚೇತನಕುಮಾರ ಚಲನ ಚಿತ್ರ ನಟ.

ಶಹಾಬಾದ :ದೇಶಕ್ಕೆ ಸಂವಿಧಾನ ರಚಿಸುವ ಮೂಲಕ ಸಮಾನತೆಯ ಭದ್ರ ಬುನಾದಿ ಹಾಕಿ, ಬಡವ, ಬಲ್ಲಿದವರ ಧ್ವನಿಯಾಗಿ ಶಕ್ತಿ ತುಂಬಿದ ಮಹಾಚೇತನ ಅಂಬೇಡ್ಕರ್ ಎಂದು ಚಲನ ಚಿತ್ರ ನಟ ಮತ್ತು ವಿಚಾರವಾದಿ ಚೇತನಕುಮಾರ ಹೇಳಿದರು.

Contact Your\'s Advertisement; 9902492681

ಅವರು ರವಿವಾರ ನಗರದ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಅಂಬೇಡ್ಕರ್ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ “ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶ” ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.

ವಿಶ್ವ ಜ್ಞಾನಿ, ಬಡವ, ಬಲ್ಲಿದವರ ಧ್ವನಿಯಾಗಿ ಶಕ್ತಿ ತುಂಬಿದ ಮಹಾಚೇತನ. ಸಂವಿಧಾನದ ಮೂಲಕ ಭಾರತೀಯರಿಗೆ ಸಮಾನ ನ್ಯಾಯ ಕೊಡಿಸಿದ ಹರಿಕಾರ, ಮಹಿಳೆಯರಿಗೆ ಸ್ವಾತಂತ್ರ್ಯ ಬದುಕು ಕಟ್ಟಿಕೊಟ್ಟ ಮಹಾನ್ ನಾಯಕ, ಭಾರತದ ಭಾಗ್ಯವಿಧಾತ ಅಂಬೇಡ್ಕರ್ ಎಂದರು.

ನಾನು ಅಮೇರಿಕಾದಲ್ಲಿ ಶಿಕ್ಷಣ ಮುಗಿಸಿರಬಹುದು.ಆದರೆ ಭಾರತದ ಪುಣ್ಯ ಭೂಮಿಯಲ್ಲಿ ಇರಲು ಇಷ್ಟಪಡುತ್ತೆನೆ. ಕಾರಣ ಇಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಪೆರಿಯಾರನಂತಹ ಅನೇಕ ಮಹಾಚೇತನಗಳು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ.ಆದರೆ ಇಂದು ಯುವ ಜನತೆ ಈ ಸಂವಿಧಾನಕ್ಕೆ ಗೌರವ ನೀಡಿ ಅದನ್ನು ಕಾಪಾಡುವತ್ತ ಗಮನಹರಿಸಬೇಕು.ಯಾರು ಸತ್ಯದ ಪರವಾಗಿ ನಿಲ್ಲತಾರೆ,ಯಾರು ಪ್ರಶ್ನೆ ಮಾಡುತ್ತಾರೆ ,ಯಾರು ವೈಜ್ಞಾನಿಕ ಮನೋಭಾವನೆ ಮೂಡಿಸುತ್ತಾರೆ ಅವರಿಗೆ ಕಷ್ಟಗಳು ಬರುತ್ತವೆ.ಸತ್ಯದ ಪರವಾಗಿ ನಿಂತಾಗ ಕೆಟ್ಟ ಶಕ್ತಿಗಳು ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ.ಏನೇ ಒತ್ತಡ ಹಾಗೂಕಷ್ಟಗಳು ಬಂದರೂ ಹೆದರದೇ, ಅಳುಕದೇ ಮುನ್ನುಗ್ಗಬೇಕಾಗಿದೆ.

ಬುದ್ಧ,ಬಸವ ಮತ್ತು ಅಂಬೇಡ್ಕರ್ ಈ ದೇಶದ ಗಟ್ಟಿಯಾದ ಬೀಜಗಳು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಆಸ್ತಿಯಾಗಿದ್ದು, ಅವರ ತತ್ವ ಸಿದ್ಧಾಂತ ಹಾಗೂ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅವರ ಉದಾತ್ತ ಜೀವನ ಶೈಲಿ ಪ್ರತಿಯೊಬ್ಬ ನಾಗರೀಕರಿಗೂ ಆದರ್ಶವಾಗಿದೆ. ಎಂದು ಹೇಳಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ತಮ್ಮನ್ನು ಶೋಷಣೆ, ದೌರ್ಜನ್ಯ ಮಾಡಿದ ಸಮಾಜದ ವಿರುದ್ಧ ಎಂದಿಗೂ ಪ್ರತಿಕಾರದಿಂದ ಸಿಡಿದು ನಿಂತವರಲ್ಲ. ಬದಲಿಗೆ ಅವರ ಗುರಿ ಈ ರಾಷ್ಟ್ರದ ಪ್ರತಿಯೊಬ್ಬರು ಸಹೋದರತ್ವದಿಂದ, ಸಮಾನತೆಯಿಂದ ಬದುಕಬೇಕು ಎಂಬ ಕನಸ್ಸು ಕಂಡವರು ಡಾ.ಬಿ.ಆರ್. ಅಂಬೇಡ್ಕರ್ ಎಂದು ಹೇಳಿದರು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಶಿವಗಂಗಾ ರುಮ್ಮ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಜೀವಿತಾವಧಿಯ ಉದ್ದಕ್ಕೂ ಶೋಷಿತ ಸಮುದಾಯಗಳ ಜನರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದರು. ಸಧೃಢ ಭಾರತ ನಿರ್ಮಾಣಕ್ಕೆ ಬಾಬಾ ಸಾಹೇಬರ ಕೊಡುಗೆ ಅನನ್ಯವಾದುದು, ಹೀಗಾಗಿ ಅವರ ಆದರ್ಶ ಹಾಗೂ ಸಂದೇಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಬೆಳಗ್ಗೆ ಧ್ವಜಾರೋಹಣ ನಗರಸಭೆ ಮಾಜಿ ಅಧ್ಯಕ್ಷ ನಾಗರಾಜ ಸಿಂಗೆ ಧ್ವಜಾರೋಹಣ ಮಾಡಿದರು. ರಾಜು ಜಂಬಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಮುಖಂಡ ಸುರೇಶ ಮೆಂಗನ ಮೆರವಣಿಗೆಗೆ ಚಾಲನೆ ನೀಡಿದರು.

ಬೀದರಿನ ಅಣುದೂರ ವರಜ್ಯೋತಿ ಬಂತೇಜಿ, ಪ್ರತಿಭಾ ಪ್ರಿಯದರ್ಶಿನಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ವಾಹಜ್ ಬಾಬಾ , ಡಾ.ಸಂಧ್ಯಾ ಕಾನೇಕರ್, ಶಿವಪುತ್ರ ಕರಣಿಕ, ಹಾಷಮ್ ಖಾನ್, ಡಿ.ಡಿ. ಓಣಿ, ಫಾದರ್ ಸ್ಟ್ಯಾನಿ ಗೋವಿಯಸ, ಮಲ್ಕಪ್ಪಾ ಮುದ್ದಾ, ಕಲ್ಲೋಳಿ ಕುಸಾಳೆ, ಕಿಶನ್ ನಾಯಕ ಹಾಗೂ ಸರ್ವ ಪದಾಧಿಕಾರಿಗಳು ವೇದಿಕೆ ಮೇಲೆ ಇದ್ದರು. ಮೈಸೂರಿನ ಅಂತರಾಷ್ಟ್ರೀಯ ಸುಗಮ ಸಂಗೀತ ಗಾಯಕರಾದ ಅಮ್ಮ ರಾಮಚಂದ್ರ ಕ್ರಾಂತಿ ಗೀತೆಗಳು ಹಾಡಿದರು. ಜಯಂತೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್. ಮೇತ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಕೋಬಾಳಕರ ಸ್ವಾಗತಿಸಿದರು, ಪ್ರವೀಣ ರಾಜನ ನಿರೂಪಿಸಿದರು, ಪುನೀತ ಹಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here