ಸರ್ಕಾರ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಡವಾಡುತ್ತಿದೆ: ಪ್ರಿಯಾಂಕ್ ಖರ್ಗೆ

0
5

ಕಲಬುರಗಿ: ಪಿಎಸ್ಐ ನೇಮಕಾತಿ ವಿಷಯದಲ್ಲಿ ಸರ್ಕಾರ ಪರೀಕ್ಷೆ ಬರೆದ 57,000 ಅಭ್ಯರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ‌ ಸಚಿವರಾದ , ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಚಿಂಚೋಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರ ಯೋಗ್ಯತೆಗೆ ದಿವ್ಯಾ ಹಾಗರಗಿ ಅವರನ್ನ ಬಂಧಿಸಲು‌ ಸಾಧ್ಯವಾಗಿಲ್ಲ. ಆದರೆ, ತಮ್ಮ ಅಸಮರ್ಥತೆ ಮುಚ್ಚಿಕೊಳ್ಳಲು ನಮಗೆ ನೋಟಿಸು ಕಳಿಸುತ್ತಾರೆ ಎಂದು ಟೀಕಿಸಿ ಈ‌ ಹಗರಣದ ಬಗ್ಗೆ ಮೊದಲು ಸರ್ಕಾರಕ್ಕೆ‌ ಪತ್ರ ಬರೆದ ಸಚಿವ ಪ್ರಭು ಚವ್ಹಾಣ್ ಹಾಗೂ ಮತ್ತೊಬ್ಬ ಬಿಜೆಪಿ ಶಾಸಕರಿಗೆ ಯಾಕೆ ನೋಟೀಸು ನೀಡಿಲ್ಲ ? ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಡಬಲ್‌ ಇಂಜಿನ್ ಸರ್ಕಾರ ಉದ್ಯೋಗ ಸೃಷ್ಠಿಯ ಭರವಸೆ ನೀಡಿತ್ತು. ಇರೂವರೆಗೆ ಎಷ್ಟು ಕೋಟಿ ಉದ್ಯೋಗ ಸೃಷ್ಠಿಸಿದ್ದಾರೆ ಎಂದು ಪ್ರಶ್ನಿಸಿದ ಶಾಸಕರು ಭ್ರಷ್ಟಾಚಾರ ಸರ್ಕಾರದ‌ ಎಲ್ಲ ಹಂತದಲ್ಲಿ ವ್ಯಾಪಕವಾಗಿ ಹಬ್ಬಿದೆ. ಚಿಂಚೋಳಿಯಲ್ಲಿಯೂ ಕೂಡಾ ಗುತ್ತಿಗೆದಾರರೊಬ್ಬರು ಸರ್ಕಾರದ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದು ಅವಿನಾಶ್ ಜಾಧವ ರಂತ ಯುವ ರಾಜಕಾರಣಿ ಕ್ಷೇತ್ರದಲ್ಲಿ ನಡೆಯುತ್ತಿರುವುದು ದುರಂತ ಎಂದರು.

ಕೈಗಾರಿಕೆಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಕೈಗೊಳ್ಳುತ್ತಿಲ್ಲ ಎಂದು ದೂರಿದ ಶಾಸಕರು, ರಾಜ್ಯ ಸರ್ಕಾರದ‌ ಕೈಗಾರಿಕ‌ ವಿರೋಧಿ ನೀತಿಯಿಂದಾಗಿ ಇಂದು ತೆಲಂಗಾಣ, ತಮಿಳುನಾಡಿಗೆ ಕೈಗಾರಿಕೆಗಳು ಹೋಗುತ್ತಿವೆ. ಕರ್ನಾಟಕ ಬರಬರುತ್ತಾ, ಯುಪಿ‌ ಬಿಹಾರ ರಾಜ್ಯಗಳಿಗಿಂತ ಕಡಿಮೆ ಸ್ಥಾನಕ್ಕೆ‌ ಇಳಿದಿದೆ.

ಪದೇ ಪದೇ ಸಿಐಡಿ ನೋಟಿಸು ನೀಡುತ್ತಿರುವ ಬಗ್ಗೆ ಕೇಳಿದಾಗ ಉತ್ತರಿಸಿದ ಶಾಸಕರು ನೀಡಲಿ ಬಿಡಿ, ನಾನು ಹೋರಾಟ ಮಾಡುತ್ತಿರುವುದು ಜನರ ಪರವಾಗಿ ತಾನೆ? ಎಂದರು. ಬಿಟ್ ಕಾಯಿನ್ ವಿಚಾರದಲ್ಲಿ ಒಂದು ಲಾಜಿಕ್ ಎಂಡ್ ವರೆಗೆ ಮಾಧ್ಯಮಗಳು ತೆಗೆದುಕೊಂಡು ಹೋಗಲಿಲ್ಲ ಎಂದ ಶಾಸಕರು, ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡಲಾಗುತ್ತದೆ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಗೆ ಬಿಟ್ ಕಾಯಿನ್ ಬಗ್ಗೆ ಗೊತ್ತಿದೆ ಆದರೆ ಬಾಯಿಬಿಡುತ್ತಿಲ್ಲ ಎಂದರು.

ಬಿಜೆಪಿ ಸರ್ಕಾರ ಹಾಗೂ ನಾಯಕರ ಹಗರಣದ ಬಗ್ಗೆ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕಾಗಿದೆ ಎಂದ ಖರ್ಗೆ, ದಿವ್ಯಾ ಹಾಗರಗಿ ಬಂಧನಕ್ಕೆ ನಾನು ಒತ್ತಾಯಪಡಿಸಿದ್ದೇನೆ. ಆದರೆ, ಬಿಜೆಪಿಯವರೇ ಅವರನ್ನ ತಮ್ಮ ಪಕ್ಷದವರು ಅಲ್ಲ ಎಂದಿದ್ದಾರೆ ಇದು ಹಾಸ್ಯಾಸ್ಪದ.

ದಿವ್ಯಾ ಹಾಗರಗಿ ಇನ್ನೆರಡು ದಿನಗಳಲ್ಲಿ ಬಂಧನವಾಗಲಿದೆ ಎಂದು‌ ಸಿಎಂ ಅವರು ಹೇಳಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಹಾಗಾದರೆ ದಿವ್ಯಾ ಎಲ್ಲಿದ್ದಾರೆ ಅಂತ ಸಿಎಂ ಗೆ ಗೊತ್ತಿದೆಯಾ? ಅವರೇ ರಕ್ಷಣೆ ಮಾಡುತ್ತಿದ್ದಾರೆಯೇ? ಎಂದು ಮರುಪ್ರಶ್ನೆ ಹಾಕಿದರು. ಜ್ಞಾನಜ್ಯೋತಿ‌ ಕೇಂದ್ರ ಪರೀಕ್ಷೆ ನಡೆಸಲು ಸೂಕ್ತವಿಲ್ಲ ಎಂದು ವರದಿ ಇದ್ದರೂ ಕೂಡಾ ಅಲ್ಲಿಯೇ ಪರೀಕ್ಷೆ ನಡೆಸಲು ಶಿಫಾರಸ್ಸು ಮಾಡಿದ್ದು ಯಾರು ? ಎಂಪಿ ಶಿಫಾರಸ್ಸು ಮಾಡಿಲ್ಲ ಎಂದರೆ ಮತ್ತೆ ಶಿಫಾರಸ್ಸು ಮಾಡಿದ್ದು ಯಾರು ? ಈ‌ ವಿಚಾರದಲ್ಲಿ ಸಮಗ್ರ ತನಿಖೆ ನಡೆದು ಯಾರ್ಯಾರಿಗೆ ಹಣ ವರ್ಗಾವಣೆಯಾಗಿದೆ ಎಂದು ತಿಳಿಯುತ್ತದೆ ಎಂದರು.

ಚಿಂಚೋಳಿ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಶಾಸಕರು ಜನರ ಸಲುವಾಗಿ ಕೇವಲ ಚಿಂಚೋಳಿ ಮಾತ್ರವಲ್ಲ ಕಲಬುರಗಿ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಪಕ್ಷ ಸೂಚಿಸಿದರೆ ರೆಡಿಯಾಗಿದ್ದೇನೆ. ಮುಂದಿನ‌ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಜಯಭೇರಿ ಬಾರಿಸಲಿದೆ. ಉಮೇಶ್ ಜಾಧವ ಆದ್ರೂ ನಿಲ್ಲಲಿ ಅಥವಾ ಮೋದಿನೆ ಬರಲಿ ನಮಗೆ ಅದು ಸಂಬಂಧಪಡದ ವಿಚಾರ. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಸುಭಾಷ ರಾಠೋಡ ಇರಲಿದ್ದಾರೆ. ಮುಂದೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಆತ್ಮವಿಶ್ವಾಸದಿಂದ‌ ನುಡಿದರು.

ಜಗದೇವ ಗುತ್ತೇದಾರ, ಸುಭಾಷ್ ರಾಠೋಡ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here