ತನ್ನ ‘ಲಕ್ಕಿ ಕಾರ್’ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್

0
19

ಕಲಬುರಗಿ; ಕಲಬುರಗಿ ದಕ್ಷಿಣದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್ ತಮಗೆ ಈ ಭಾಗದ ಸುಪ್ರಸಿದ್ಧ ಜಿಡಗಾ/ ಮುಗಳಖೋಡ ಮಠದ ಹಿರಿಯ ಗುರುಗಳಾದ ಲಿಂ. ಸಿದ್ರಾಮೇಶ್ವರ ಶ್ರೀಗಳು ಆಶಿರ್ವಾದ ರೂಪದಲ್ಲಿ ಕೊಡುಗೆ ನೀಡಿದ್ದ ಲ್ಯಾನ್ಸರ್ ಕಾರಲ್ಲೇ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ಅಲ್ಲಂಪ್ರಭು ಪಾಟೀಲರು ಅಪಾರ ದೈವಭಕ್ತರು. ಅದರಲ್ಲೂ ಆಳಂದ ತಲೂಕಿನಲ್ಲಿರುವ ಜಿಡÀಗಾ ನವ ಕಲ್ಯಾಣ ಮಠದ ಮೇಲೆ, ಅಲ್ಲಿನ ಗುರುಗಳ ಮೇಲೆ ಇವರಿಗೆ ವಿಶೇಷ ನಂಬಿಕೆ ಹಾಗೂ ಭಕ್ತಿ, ಹೀಗಾಗಿಯೇ ಪಾಟೀಲರು ಈ ಮಠಕ್ಕೆ ತುಂಬ ನಡೆದುಕೊಳ್ಳುತ್ತಾರೆ. ಹೀಗಾಗಿ ಜಿಡಗಾ ಮಠದ ಹಿರಿಯರಾದ ಲಿಂಗೈಕ್ಯ ಸಿದ್ರಾಮೇಶ್ವರ ಶ್ರೀಗಳ ಅಪಾರ ಕರುಣೆ ಆಶಿರ್ವಾದ ಇತ್ತು.

Contact Your\'s Advertisement; 9902492681

ಇದೇ ಕಾರಣದಿಂದಲೇ ಸಿದ್ರಾಮೇಶ್ವರರು 2000 ನೇ ಇಸ್ವಿಯಲ್ಲಿ ಅಲ್ಲಂಪ್ರಭು ಪಾಟೀಲರಿಗೆ ಉತಂಬ ಪರೀತಿ, ಕಾಳಜಿಯಿಂದ ಲ್ಯಾನ್ಸರ್ ಕಾರ್ ಕೊಡುಗೆ ನೀಡಿ ಹರಸಿದ್ದರು. ಇದೇ ಕಾgರನ್ನ ಅಲ್ಲಂಪ್ರಭು ಪಾಟೀಲರ ತಮ್ಮ ಅದೃಷ್ಟದ ಕಾರೆಂದು ತಿಳಿದಿರೋದರಿಂದ ವಿಶೇಷ ಸಂದರ್ಭಗಳಲ್ಲಿ ಇದನ್ನು ಬಳಸುತ್ತಾರೆ. ಅಲ್ಲಂಪ್ರಭು ಪಾಟೀಲರು ಜಿಡಗಾ ಮಠದ ಸದ್ಯದ ಪೀಠಾಧಿಪತಿಗಳಾದ ಡಾ. ಮುರುಘರಾಜೇಂದ್ರ ಸ್ವಾಮೀಜಿಗಳ ಜೊತೆಗೂ ತುಂಬ ಉತ್ತಮ ಒಡನಾಟ ಹೊಂದಿದ್ದಾರೆ.

ಚುನಾವಮೆ ನಾಮಪತ್ರ ಸಲ್ಲಿಕೆಯ ಈ ವಿಶೇಷ ದಿನದಂದು ಹಾಗೂ ಚುನಾವಣೆಯಲ್ಲಿ ಗುರುಗಳು ಹಾಗೂ ಜನರ ಆಶಿರ್ವಾದ ಮುಖ್ಯವಾಗಿರುತ್ತದೆಂದು ಅಲ್ಲಂಪ್ರಭು ಪಾಟೀಲರು ಗುಡಿ- ಗುಂಡಾರಗಳಿಗೆ ದರುಶನ ಪಡೆದು ಬಂದ ನಂತರ ಲ್ಯಾನ್ಸರ್ ಕಾರ್ ಹತ್ತಿ ನಾಮಪತ್ರ ಸಲ್ಲಿಸಿ ಸಾರ್ವಜನಿಕವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಜಿಡಗಾ ಮಠದ ಭಕ್ತರಂತೂ ಅಲ್ಲಂಪ್ರಭು ಪಾಟೀಲರು ತಮ್ಮ ಹಳೆಯ ಲ್ಯಾನ್ಸರ್ ಕಾರಲ್ಲಿ ಕಲಬುರಗಿ ಸಹಾಯಕ ಆಯುಕ್ತರ ಕಚೇರಿಗೆ ಬಂದಿರೋದನ್ನ ಕಂಡು ಜಯಘೋಷ ಹಾಕಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here